ವೈರ್‌ ಲೆಸ್‌ ಇಯರ್‌ಬಡ್ಸ್ ಮಾರಾಟದಲ್ಲಿ ದೇಸೀ ಕಂಪನಿಗಳದ್ದೇ ಮೇಲುಗೈ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದಿನ ಸ್ಮಾರ್ಟ್‌ ಫೋನ್‌ ಜಮಾನಾದಲ್ಲಿ ಜನರು ದಿನ ದಿನವೂ ಸ್ಮಾರ್ಟ್‌ ಆಗುವತ್ತ ಗಮನಹರಿಸುತ್ತಿದ್ದಾರೆ. ದಿನದಿನವೂ ಹೊಸ ಹೊಸ ಆವಿಷ್ಕಾರಗಳು ಬರುತ್ತಲೇ ಇರುತ್ತವೆ. ಅವುಗಳ್ಲಲಿ ವೈರ್‌ಲೆಸ್‌ ಇಯರ್‌ ಬಡ್ಸ್‌ ಗಳೂ ಕೂಡಾ ಒಂದು. ಮೊಬೈಲ್‌ ಫೋನ್‌ ಬಂದಾಗಿನಿಂದಲೂ ಅದರೊಟ್ಟಿಗೆ ಅತಿ ಅಗತ್ಯದ ವಸ್ತುವೆನಿಸಿಕೊಂಡಿದ್ದು ಇಯರ್‌ ಫೋನುಗಳು. ಮೊದಲಿಗೆ ವಯರ್ಡ್‌ ಇಯರ್‌ ಫೋನುಗಳು ಜನಪ್ರಿಯವಾಗಿದ್ದವು. ಆದರೀಗ ಮೊಬೈಲ್‌ ಗಳು ಸ್ಮಾರ್ಟ್‌ ಆಗಿರುವಂತೆ ವೈರ್‌ಲೆಸ್‌ ಇಯರ್‌ ಫೋನ್‌ ಗಳನ್ನು ಜನ ನೆಚ್ಚಿಕೊಳ್ಳುತ್ತಿದ್ದಾರೆ. ಒಂದು ಚಿಕ್ಕ ಹುಣಸೇಬೀಜಗಳಂತೆ ಕಾಣುವ ಟ್ರೂ ವೈರ್‌ಲೆಸ್‌ ಸ್ಟಿರಿಯೋ ಇಯರ್‌ ಬಡ್ಸ್‌ ಗಳೀಗ ಮಾರುಕಟ್ಟೆಯಲ್ಲಿ ಮನ್ನಣೆ ಗಳಿಸುತ್ತಿವೆ. ಇದರಲ್ಲೇನು ವಿಶೇಷ ಅಂದಿರಾ ? ಈ ಟ್ರೂ ವೈರ್‌ಲೆಸ್‌ ಸ್ಟಿರಿಯೋ ಇಯರ್‌ ಬಡ್ಸ್‌ ಉತ್ಪಾದನೆಯಲ್ಲಿ ಭಾರತದ ದೇಸೀ ಕಂಪನಿಗಳೇ ಮೇಲುಗೈ ಸಾಧಿಸಿವೆ ಅನ್ನೋದು.

ಹೌದು, ಭಾರತದಲ್ಲಿ ಟ್ರೂ ವೈರ್‌ಲೆಸ್ ಸ್ಟಿರಿಯೊ (TWS) ಇಯರ್‌ಬಡ್ಸ್ ಉದ್ಯಮವು ದೊಡ್ಡ ಉತ್ತೇಜನವನ್ನು ಪಡೆದುಕೊಂಡಿದೆ. 3ನೇ ತ್ರೈಮಾಸಿಕದಲ್ಲಿ ಸಾಗಣೆಗಳು ವರ್ಷದಿಂದ ವರ್ಷಕ್ಕೆ ದ್ವಿಗುಣಗೊಂಡಿವೆ. ಆರಂಭಿಕ ಹಬ್ಬದ ಸೀಸನ್, ರಿಯಾಯಿತಿಗಳು ಇತ್ಯಾದಿಗಳಿಂದ ಮಾರಾಟ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.
ಕೌಂಟರ್‌ಪಾಯಿಂಟ್ ರಿಸರ್ಚ್‌ನ ವರದಿಯ ಪ್ರಕಾರ, ಭಾರತೀಯ ಕಂಪನಿಗಳು 3ನೇ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 143 ಶೇಕಡಾ ಬೆಳವಣಿಗೆ ವರದಿ ಮಾಡಿವೆ. ಅದರಲ್ಲೂ ದೇಶೀಯ ಇಯರ್‌ಬಡ್ಸ್ ಕಂಪನಿಗಳು ಉದ್ಯಮದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿವೆ.

ಭಾರತೀಯ ಕಂಪನಿಗಳು TWS ವಿಭಾಗದಲ್ಲಿ ಪ್ರಾಬಲ್ಯ ಗಳಿಸಿದ್ದು ಅಗ್ರ ಐದು ಕಂಪನಿಗಳಲ್ಲಿ, ನಾಲ್ಕು ಸ್ಥಾನಗಳನ್ನು ಭಾರತೀಯ ಕಂಪನಿಗಳು ಆಕ್ರಮಿಸಿಕೊಂಡಿವೆ . ದೇಶೀಯ ಕಂಪನಿ ಬೋಟ್ ಅಗ್ರ ಸ್ಥಾನವನ್ನು ಆಕ್ರಮಿಸಿಕೊಂಡಿದ್ದರೆ ನಾಯ್ಸ್, ಮಿವಿ ಮತ್ತು ಬೌಲ್ಟ್ ಆಡಿಯೋ ನಂತರದ ಸ್ಥಾನಗಳಲ್ಲಿವೆ.
BoAt, Noise ಮತ್ತು Mivi ಮೊದಲ ಮೂರು ಸ್ಥಾನಗಳನ್ನು ಆಕ್ರಮಿಸಿಕೊಂಡಿದ್ದರೆ, ಬೌಲ್ಟ್ ಆಡಿಯೊ ಐದನೇ ಸ್ಥಾನವನ್ನು ಆಕ್ರಮಿಸಿಕೊಂಡಿದೆ.

ಮತ್ತೊಂದೆಡೆ, ಚೀನಾದ ಕಂಪನಿಗಳು ಕೇವಲ 13% ಹೆಚ್ಚಳವನ್ನು ವರದಿ ಮಾಡಿದೆ, OnePlus ಅಲ್ಪ ಮುನ್ನಡೆ ಸಾಧಿಸಿದ್ದು Apple, Samsung ಮತ್ತು JBL ನಂತಹ ಪ್ರೀಮಿಯಂ ಬ್ರ್ಯಾಂಡ್‌ಗಳು 9% ಬೆಳವಣಿಗೆಯನ್ನು ವರದಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!