Wednesday, July 6, 2022

Latest Posts

ತೆರೆಯಲ್ಲಿ ಜನಪ್ರಿಯ ನಟನಾದರೂ ಬದುಕನ್ನು ಬೀದಿಗೆ ತಂದ ಕೊರೋನಾ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಕೊರೋನಾ ಅದೆಷ್ಟು ಜನರ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ. ಅದು ಕೇವಲ ಜನಸಾಮಾನ್ಯರು ಮಾತ್ರವಲ್ಲದೇ ಸಿನಿಮಾ ರಂಗದವರನ್ನು ಬಿಟ್ಟಿಲ್ಲ. ಇದೀಗ ಹಿಂದಿಯ ಜನಪ್ರಿಯ ಧಾರಾವಾಹಿ ಕೃಷ್ಣದಲ್ಲಿ ಭೀಷ್ಮ ಪಾತ್ರವನ್ನು ನಿರ್ವಹಿಸಿದ್ದ ಸುನಿಲ್​ ನಗರ್​ ಅವರ ಜೀವನ ಅತ್ಯಂತ ಕಷ್ಟವಾಗಿದೆ.
ಹೌದು, ಆರಂಭದ ದಿನಗಳಲ್ಲಿ ಅವರಿಗೆ ನಟನೆಗೆ ತುಂಬಾ ಅವಕಾಶಗಳು ಬರುತ್ತಿದ್ದವಂತೆ. ಆದರೆ ವಯಸ್ಸಾದ ಮೇಲೆ ಅವಕಾಶಗಳು ಕಡಿಮೆಯಾಗಿವೆ. ಆರ್ಥಿಕ ಸ್ಥಿತಿ ಹದಗೆಡಲಾರಂಭಿಸಿದೆ. ಆ ಕಾರಣದಿಂದಾಗಿ ಅವರು ಮುಂಬೈನಲ್ಲಿದ್ದ ತಮ್ಮ ಸ್ವಂತ ಮನೆಯನ್ನು ಮಾರಾಟ ಮಾಡಿ ಬಾಡಿಗೆ ಮನೆಗೆ ಶಿಫ್ಟ್​ ಆಗಿದ್ದಾರೆ.
ಇನ್ನು ಗಾಯನವೂ ಗೊತ್ತಿದ್ದಿದ್ದರಿಂದ ಅದನ್ನೇ ಬಂಡವಾಳ ಮಾಡಿಕೊಂಡು, ರೆಸ್ಟೋರೆಂಟ್​ ಒಂದರಲ್ಲಿ ಹಾಡು ಹೇಳುವ ಕೆಲಸ ಆರಂಭಿಸಿದ್ದಾರೆ. ಆದರೆ ಕಳೆದ ವರ್ಷದಿಂದ ಕೊರೋನಾ ಕಾರಣಕ್ಕೆ ಲಾಕ್​ಡೌನ್​ ಮಾಡುತ್ತಿರುವುದರಿಂದಾಗಿ ಅವರ ಕೆಲಸಕ್ಕೂ ಕತ್ತರಿ ಬಿದ್ದಿದೆ. ಕೂಡಿಟ್ಟುಕೊಂಡಿದ್ದ ಸಂಬಳ ಪೂರ್ತಿಯಾಗಿ ಖಾಲಿಯಾಗಿದೆ.
ಇದೀಗ ಮತ್ತೊಮ್ಮೆ ಮುಂಬೈ ಲಾಕ್​ಡೌನ್​ ಆಗಿರುವುದರಿಂದಾಗಿ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಕಳೆದ ಕೆಲ ತಿಂಗಳಿಂದ ಮನೆ ಬಾಡಿಗೆ ಕಟ್ಟುವುದಕ್ಕೂ ಹಣವಿಲ್ಲದೆ ಒದ್ದಾಡುತ್ತಿರುವುದಾಗಿ ಅವರ ಸ್ನೇಹಿತರೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss