Saturday, July 2, 2022

Latest Posts

ರೆಮ್ಡಿಸಿವಿರ್ ಮಾರಾಟ ಜಾಲ ಪತ್ತೆ: ಜಿಲ್ಲಾ ಆಸ್ಪತ್ರೆಯ ಮೂವರು ಸಿಬ್ಬಂದಿ ಸಹಿತ ಹತ್ತು ಜನರ ಬಂಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………

ಹೊಸದಿಗಂತ ವರದಿ, ಬಾಗಲಕೋಟೆ:

ಜಿಲ್ಲೆಯಲ್ಲಿ ರೆಮ್ಡಿಸಿವರ್ ಔಷಧ ಕೊರತೆ ಇದೆ ಎಂದು ಸುದ್ದಿಯನ್ನು ಹಬ್ಬಿಸಿ ಬ್ಲ್ಯಾಕ್ ಮಾರ್ಕೆಟ್ ದಲ್ಲಿ ಮಾರಾಟ ಮಾಡುವ ಜಾಲವನ್ನು ಪತ್ತೆ ಹಚ್ಚುವಲ್ಲಿ ಬಾಗಲಕೋಟೆ ಜಿಲ್ಲಾ ಪೊಲೀಸ್ ಇಲಾಖೆ ಯಶಸ್ವಿಯಾಗಿದೆ.
ಬ್ಲ್ಯಾಕ್ ಮಾರ್ಕೆಟ್ ದಲ್ಲಿ ರೆಮ್ಡಿಸಿವರ್ ಔಷಧವನ್ನು ಮಾರಾಟ ಮಾಡುತ್ತಿದ್ದ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ವಿಠ್ಠಲ ಚಲವಾದಿ, ರಂಗಪ್ಪ ದಿನ್ನೆ, ರಾಜು ಗುಡಿಮನಿ ಹಾಗೂ ಖಾಸಗಿ ವ್ಯಕ್ತಿಗಳಾದ ತಿಮ್ಮಣ್ಣ ಗಡದನ್ನವರ, ಬಾಲಚಂದ್ರ ಬಜಂತ್ರಿ, ಮಂಜುನಾಥ ಗಾಣಿಗೇರ, ಶ್ರೀಕಾಂತ ಲಮಾಣಿ, ಗಣೇಶ ಸಿದ್ದಪ್ಪ ನಾಟಕರ, ಮಹಾಂತಗೌಡ ಬಿರಾದಾರ, ಪ್ರವೀಣ ಕೋತಲಿ ಎಂಬ ಆರೋಪಿಗಳನ್ನು ಪತ್ತೆ ಬಂಧಿಸಲಾಗಿದೆ ಎಂದು ಎಸ್ಪಿ ಲೋಕೇಶ ಜಗಲಾಸಾರ್ ತಿಳಿಸಿದ್ದಾರೆ.
ನವನಗರದ ಜಿಲ್ಲಾ ಆಸ್ಪತ್ರೆಯ ಮೂವರು ಸಿಬ್ಬಂದಿ ಹಾಗೂ ಖಾಸಗಿ ಏಳು ಜನರು ಸೇರಿಕೊಂಡು ರೆಮಡಸಿವಿಆರ್ ಔಷಧ ಮಾರಾಟ ಮಾಡುತ್ತಿದ್ದರು. ಒಂದು ರೆಮೆಡಸಿವಿಆರ್ ಔಷಧಕ್ಕೆ 25,000ರಿಂದ 30,000 ರೂ.ಗಳವರೆಗೆ ಮಾರಾಟ ಮಾಡುವ ಪ್ರಯತ್ನದಲ್ಲಿದ್ದಾಗ ಆರೋಪಿಗಳನ್ನು ಬಂಧಿಸಲಾಯಿತು. ಹದಿನಾಲ್ಕು ರೆಮೆಡಸಿವಿಆರ್ ಪೈಕಿ ಬಳಕೆ ಮಾಡಿದ ಎರಡು ಹಾಗೂ ಬಳಕೆಯಾಗದೇ ಇರುವುದನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನ್ಯಾಯಾಲಯದ ಪರವಾಣಿಗೆಯನ್ನು ಪಡೆದು ಡಿಎಚ್ಓ ಅವರಿಗೆ ವಶಪಡಿಸಿಕೊಂಡ ಔಷಧವ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಯೊಂದು ಆಯಾಮಾದಲ್ಲಿ ತನಿಖೆಯನ್ನು ಮುಂದುವರೆಸಲಾಗಿದೆ. ಯಾವುದೇ ಕಾರಣಕ್ಕೂ ಸಾರ್ವಜನಿಕರು ಬ್ಲ್ಯಾಕ್ ಮಾರ್ಕೆಟ್ ದಲ್ಲಿ ಖರೀದಿಸುವುದರಲ್ಲಿ ತೊಡಗಬೇಡಿ. ಇದರಿಂದ ಅವಶ್ಯಕತೆ ಇರುವ ವ್ಯಕ್ತಿಗೆ ಸಿಗುವುದಿಲ್ಲ. ಅನವಶ್ಯಕ ಬೇರೆಯವರ ಕೈಗೆ ಸಿಗುವುದು ಸಾಧ್ಯತೆ ಇದೆ. ಜವಾಬ್ದಾರಿ ಅರಿತು ಕಾನೂನು ಕಾನೂನಿಗೆ ಗೌರವ ಕೊಡುವ ಕೆಲಸವನ್ನು ಮಾಡಬೇಕು ಎಂದರು. ಇಂತಹ ದಂಧೆಯಲ್ಲ ತೊಡಗಿದವರನ್ನು ಪ್ರತಿಯೊಬ್ಬರು ಜಿಲ್ಲೆಯಲ್ಲಿ ಹುಡುಕಿ ತೆಗೆಯುತ್ತೇವೆ. ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆಯನ್ನು ಎಸ್ಪಿಯವರು ನೀಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss