ಬರಿಗಣ್ಣಿನಲ್ಲೇ ನೋಡಬಹುದಾದ ಅತಿ ದೊಡ್ಡ ಬ್ಯಾಕ್ಟೀರಿಯಾ ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬ್ಯಾಕ್ಟೀರಿಯಾಗಳೆಂದರೆ ಸಾಮಾನ್ಯವಾಗಿ ಬರಿಗಣ್ಣಿಗೆ ಕಾಣಿಸದ ಜೀವಿಗಳು. ಆದರೆ ಇತ್ತೀಚಿನ ಸಂಶೋಧನೆಯೊಂದರಲ್ಲಿ ಬರಿಗಣ್ಣಿನಿಂದಲೇ ನೋಡಬಹುದಾದ ಅತಿದೊಡ್ಡ ಬ್ಯಾಕ್ಟಿರಿಯಾವೊಂದನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ. ಕೆರಿಬಿಯನ್‌ ಪ್ರದೇಶದಲ್ಲಿ ಅತಿ ದೊಡ್ಡ ಬ್ಯಾಕ್ಟೀರಿಯಂ – ವರ್ಮಿಸೆಲ್ಲಿ-ಆಕಾರದ ಜೀವಿಯನ್ನು ಪತ್ತೆ ಹಚ್ಚಲಾಗಿದೆ.

ಸುಮಾರು ಒಂದು ಸೆಂಟಿಮೀಟರ್‌ ಉದ್ದವಾಗಿರುವ ಇದು ಮಾನವನ ಕಣ್ಣಿನ ರೆಪ್ಪೆ ಕೂದಲಿನ ಗಾತ್ರದಲ್ಲಿದೆ. ಸಾಮಾನ್ಯವಾಗಿ ಬ್ಯಾಕ್ಟಿರಿಯಾಗಳು 1 ತೊಂದ 5 ಮೈಕ್ರೋಮೀಟರ್‌ಗಳಷ್ಟು ಉದ್ದವಾಗಿರುತ್ತವೆ. ಆದರೆ ಈಗ ಪತ್ತೆಹಚ್ಚಲಾಗಿರುವ ಬ್ಯಾಕ್ಟಿರಿಯಾವು 10,000 ಮೈಕ್ರೋಮೀಟರುಗಳಷ್ಟು ಉದ್ದವಾಗಿದೆ. ಇವುಗಳಲ್ಲೇ ಕೆಲವು ಇದರ ಎರಡುಪಟ್ಟು ಹೆಚ್ಚು ಉದ್ದವಾಗಿದೆ.

ಥಿಯೋಮಾರ್ಗರಿಟಾ ಮ್ಯಾಗ್ನಿಫಿಕಾ ಎಂದು ಹೆಸರಿಸಲಾಗಿರುವ ಈ ಬ್ಯಾಕ್ಟೀರಿಯಾವು ಇತರ ಬ್ಯಾಕ್ಟೀರಿಯಾಗಳಿಗಿಂತ ಸುಮಾರು 50 ಪಟ್ಟು ಹೆಚ್ಚು ದೊಡ್ಡದಾಗಿದೆ. ಬರಿಗಣ್ಣಿಗೆ ಗೋಚರಿಸುವ ಮೊದಲ ಬ್ಯಾಕ್ಟೀರಿಯಾ ಇದಾಗಿದೆ.

ಏಕಕೋಸೀಯ ಜೀವಿಗಳಾದ ಈ ಬ್ಯಾಕ್ಟೀರಿಯಾಗಳು ಬಹುತೇಕ ಎಲ್ಲಾ ಕಡೆಗಳಲ್ಲೂ ವಾಸಿಸುತ್ತವೆ. ಮಾನವನ ದೇಹದಲ್ಲೂ ಇವುಗಳು ವಾಸ ಮಾಡುತ್ತವೆ. ಅವುಗಳಲ್ಲಿ ಕೆಲವೇ ಕೆಲವು ಬ್ಯಾಕ್ಟೀರಿಯಾಗಳು ಮಾತ್ರ ರೋಗವನ್ನುಂಟು ಮಾಡುತ್ತವೆ. ಅವುಗಳನ್ನು ಭೂಮಿಯ ಮೇಲೆ ವಾಸಿಸಿದ ಮೊದಲ ಜೀವಿಗಳೆಂದು ಗುರುತಿಸಲಾಗಿದೆ. ಪರಿಸರ ವ್ಯವಸ್ಥೆಯಲ್ಲಿ ಇವುಗಳಿಗೂ ಪ್ರಮುಖ ಸ್ಥಾನವಿದೆ. ಪರಿಸರ ಚಕ್ರದಲ್ಲಿ ಬಹುಮುಖ್ಯವಾದ ʼವಿಘಟನೆʼ ಪ್ರಕ್ರಿಯೆಯಲ್ಲಿ ಬ್ಯಾಕ್ಟೀರಿಯಾಗಳ ಪಾತ್ರವು ಅತ್ಯಂತ ಮಹತ್ವದ್ದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!