ಲಾರಿ ಅಡ್ಡಗಟ್ಟಿ ದರೋಡೆ ಮಾಡಿದ್ದ ಆರೋಪಿಗಳ ಬಂಧನ

ಹೊಸದಿಗಂತ ವರದಿ, ಮೈಸೂರು:

ಲಾರಿ ಅಡ್ಡಗಟ್ಟಿ ದರೋಡೆ ಮಾಡಿದ್ದ ಆರೋಪಿಗಳನ್ನ ಮೈಸೂರಿನ ಪೊಲೀಸರು ಬಂಧಿಸಿದ್ದಾರೆ.
ಜನವರಿ 6 ರಂದು ಕೇರಳಾ ರಾಜ್ಯದ ಲಾರಿ ಚಾಲಕ ತುಮಕೂರಿನ ಸನ್ ವೀಕ್ ಕಂಪನಿಯಲ್ಲಿ ಕಬ್ಬಿಣವನ್ನು ತುಂಬಿಕೊAಡು ಕುಣಿಗಲ್, ಮದ್ದೂರು ಮೈಸೂರು ಮಾರ್ಗವಾಗಿ ಕೇರಳಾ ರಾಜ್ಯದ ಕೂತುಪುರಂಗೆ ಬಿಳಿಕೆರೆ ಗ್ರಾಮದ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ರಾತ್ರಿ 10.45 ಗಂಟೆ ಸಮಯದಲ್ಲಿ ಮೈಸೂರು ಕಡೆಯಿಂದ ಕಾರಿನಲ್ಲಿ 05 ಮಂದಿ ಅಪರಿಚಿತರು ಬಂದು, ಲಾರಿಯನ್ನು ಅಡ್ಡಗಟ್ಟಿ, ಅದರ ಚಾಲಕನಿಗೆ ಹೊಡೆದು, ಆತನ ಬಳಿಯಿದ್ದ 10,000 ರೂ ನಗದು ಹಾಗೂ ಲಾರಿ ಕೀ ಹಾಗೂ ರಿಯಲ್ ಮೀ ಮೊಬೈಲ್ ಕಿತ್ತುಕೊಂಡು ಹೋಗಿದ್ದರು. ಈ ಕುರಿತು ಲಾರಿ ಚಾಲಕ ದೂರು ನೀಡಿದ್ದರು. ಈ ಕುರಿತು ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಪತ್ತೆ ಬಗ್ಗೆ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್.ಆರ್. ಸೂಚನೆಯಂತೆ ಹಾಗೂ ಅಪರ ಪೊಲೀಸ್ ಅಧೀಕ್ಷಕರಾ .ಆರ್.ಶಿವಕುಮಾರ್ ಡಿ.ಎಸ್.ಪಿ ರವಿಪ್ರಸಾದ್ ಮಾರ್ಗದರ್ಶನದಂತೆ ಪೊಲೀಸ್ ನಿರೀಕ್ಷಕ ರವಿಕುಮಾರ್ ನೇತೃತ್ವದ ತಂಡವು, ಕಾರ್ಯಚರಣೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ್ದ ಕೆ.ಎ-41-ಸಿ-5387 ಟಯೋಟೋ ಈಟಿಯೋಸ್ ಕಾರನ್ನ ವಶಕ್ಕೆ ಪಡೆದು ಆರೋಪಿಗಳಿಂದ 2,000 ರೂ ನಗದನ್ನು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!