Sunday, April 18, 2021

Latest Posts

ವಿಕೃತಿ ಮೆರೆಯುತ್ತಿದ್ದ ವ್ಯಕ್ತಿ ಬಂಧನ : ಜೀವಂತ ಆಮೆ, ಚಿಪ್ಪುಗಳು ವಶಕ್ಕೆ

ಹೊಸ ದಿಗಂತ ವರದಿ, ಭಟ್ಕಳ:

ಪಟ್ಟಣದ ಹರಿಜನಕೇರಿಯಲ್ಲಿ ವ್ಯಕ್ತಿಯೊಬ್ಬ ವಿಕೃತಿ ಮೆರೆಯುತ್ತಿದ್ದಾನೆ ಎಂದು ಹರಿಜನಕೇರಿಯ ಸ್ಥಳೀಯರೇ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿದ್ದು, ತಹಶೀಲ್ದಾರ್ ಎಸ್ ರವಿಚಂದ್ರ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಪಂಚನಾಮೆ ನಡೆಸಿದ್ದಾರೆ.

ಹರಿಜನಕೇರಿಯ ಮಂಜು ಎಂಬಾತನೇ ಬಂಧಿಸಲ್ಪಟ್ಟ ವ್ಯಕ್ತಿಯಾಗಿದ್ದಾನೆ. ಇವನು ಪೌರಕಾರ್ಮಿಕರೇ ವಾಸಿಸುವ ಹರಿಜನಕೇರಿಯಲ್ಲಿ ಮಹಿಳೆಯರು ಸ್ನಾನಕ್ಕೆ, ಶೌಚಕ್ಕೆ ತೆರಳುವಾಗ ಅವರನ್ನು ಹಿಂಬಾಲಿಸಿ ಬಂದು ಬಟ್ಟೆ ತೆಗೆದು ಅಸಭ್ಯವಾಗಿ ವರ್ತಿಸುವುದು, ಕುಡಿಯುವ ನೀರಿನ ಪೈಪನ್ನು ತುಂಡು ಮಾಡಿ ನೀರು ಬರದಂತೆ ಮಾಡುವುದು, ಗುಡ್ಡ ಪ್ರದೇಶದ ದಿಬ್ಬವನ್ನು ತೆಗೆದು, ಅದರ ಅಂಚಿನಲ್ಲಿದ್ದ ಮನೆಯವರು ಭಯದಿಂದ ಇರಬೇಕಾದ ಸ್ಥಿತಿ ನಿರ್ಮಾಣ ಮಾಡುವುದು ಈತನ ವಿಕೃತಿ ಕೃತ್ಯವಾಗಿದೆ. ಈತನ ವಿರುದ್ದ ಸೂಕ್ತ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ತಹಶೀಲ್ದಾರ್ ಅವರು ಸ್ಥಳ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಆರೋಪಿಯ ಮನೆಯಲ್ಲಿ ಜೀವಂತ ಆಮೆ ಹಾಗೂ ಆಮೆಯ ಚಿಪ್ಪುಗಳು ದೊರಕಿದೆ. ಇವುಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ನೀಡಲಾಗಿದೆ. ಜೀವಂತ ಆಮೆ ಹಾಗೂ ಆಮೆಯ ಚಿಪ್ಪುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಅದು ಎಲ್ಲಿಂದ ಬಂತು, ಯಾರು ತಂದಿಟ್ಟಿರಬಹುದು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದು, ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತದೆ ಎಂದು ಎಸಿಎಫ್ ಸುದರ್ಶನ ಅವರು ತಿಳಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss