Thursday, August 18, 2022

Latest Posts

ಬೆಳೆವಿಮೆ ಯೋಜನೆಯಡಿ ಜಿಲ್ಲೆಯ ರೈತರಿಗೆ 8.28 ಕೋ.ರೂ. ಪರಿಹಾರ ಸಂದಾಯ: ಎಂ.ತಿರುಮಲೇಶ್

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಬೆಳೆವಿಮೆ ಯೋಜನೆಯಡಿ ಜಿಲ್ಲೆಯ ರೈತರಿಗೆ 8.28 ಕೋಟಿ ರೂ. ಪರಿಹಾರ ಸಂದಾಯವಾಗಿದೆ ಎಂದು ಕೃಷಿ ಇಲಾಖೆ ಜಂಟೀ ನಿರ್ದೇಶಕ ಎಂ.ತಿರುಮಲೇಶ್ ತಿಳಿಸಿದರು.
ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರೈತರು ಒಟ್ಟು 2 ಕೋಟಿ ರೂ. ವಿಮೆ ಹಣವನ್ನು ಜಮಾ ಮಾಡಿದ್ದರು. ವಿಮಾ ಕಂಪನಿಗಳು ಪರಿಹಾರವಾಗಿ 8.28 ಕೋಟಿ ರೂ. ಹಣ ಮರುಪಾವತಿಸಿವೆ ಎಂದು ತಿಳಿಸಿದರು.
2020-21 ನೇ ಸಾಲಿನಲ್ಲಿ ವಿಮೆ ಕಟ್ಟಿದ ರೈತರಿಗೆ ಈಗಾಗಲೇ 27 ಲಕ್ಷ ರೂ. ಪರಿಹಾರದ ಹಣ ಬಂದಿದೆ. ಬೆಳೆ ಸಮೀಕ್ಷೆ ಯೋಜನೆ ಈ ಬಾರಿಯೂ ಆರಂಭವಾದ್ದು ರೈತರು ಲಾಭ ಪಡೆಯಬೇಕು ಎಂದರು.
ರೈತರಿಗಾಗಿ ಈಗಾಗಲೇ ಆಪ್ ಬಿಡುಗಡೆ ಮಾಡಲಾಗಿದೆ ಖಾಸಗಿ ನಿವಾಸಿಗಳೆಂದು ಸ್ಥಳೀಯ ವ್ಯಕ್ತಿಗಳನ್ನು ನೇಮಿಸಲಾಗಿದೆ. ರೈತರು ಹೆಚ್ಚಾಗಿ ಬೆಳೆ ಸಮೀಕ್ಷೆಯಲ್ಲಿ ತೊಡಗಿಸಿಕೊಂಡರೆ ಲಾಭಗಳು ಹೆಚ್ಚಾಗಿವೆ. ಆರ್‍ಟಿಸಿನಲ್ಲಿ ಬೆಳೆ ಕಾಲಂನಲ್ಲಿ ಬಂದು ಕೂರುತ್ತದೆ. ಎಪಿಎಂಸಿಗಳಿಗೆ ಬೆಳೆಗಳನ್ನು ಹಾಕುವಾಗ ಅನುಕೂಲವಾಗುತ್ತದೆ. ಅತೀವೃಷ್ಠಿ, ಅನಾವೃಷ್ಠಿ ಸಂಭವಿಸಿದರೆ ಸರ್ಕಾರದಿಂದ ಘೋಷಣೆ ಮಾಡುವ ಪರಿಹಾರಗಳು ನೇರವಾಗಿ ಅವರ ಖಾತೆಗೆ ಜಮೆ ಮಾಡಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.
ಒಟ್ಟಾರೆ ಬೆಳೆ ಇಳುವರಿ ಅಂಕಿ ಅಂಶಗಳನ್ನು ಕ್ರೂಢೀಕರಿಸಲು ಅನುಕೂಲವಾಗುತ್ತದೆ. ಬ್ಯಾಂಕ್ ಸಾಲ, ಬೆಳೆ ವಿಮೆ ಪ್ರತಿಯೊಂದಕ್ಕೂ ಬೆಳೆ ಸಮೀಕ್ಷೆ ಆಪ್‍ನಲ್ಲಿ ನೊಂದಣಿ ಆಧಾರದಲ್ಲಿ ಪರಿಹಾರ ಸಿಗುತ್ತದೆ ಎಂದರು.
ಈಗ ಮುಂಗಾರು ಆಗಿರುವುದರಿಂದ ಕಡೂರು, ಚಿಕ್ಕಮಗಳೂರು, ತರೀಕೆರೆ ಭಾಗದಲ್ಲಿ ಉತ್ತಮ ಪ್ರಮಾಣದ ಬಿತ್ತನೆಯೂ ಆಗಿದೆ. ಅಂತರ ಬೇಸಾಯ ಚಟುವಟಿಕೆಗಳು ನಡೆಯುತ್ತಿವೆ. ಎಲ್ಲಿಯಾದರೂ ಬೆಳೆಗಳಿಗೆ ಕೀಟ ರೋಗ ಕಂಡುಬಂದರೆ ಸೂಕ್ತ ಔಷದೋಪಚಾರವನ್ನು ಮಾಡಿಕೊಳ್ಳಬೇಕಾಗುತ್ತದೆ. ರೈತ ಸಂಪರ್ಕವನ್ನು ಭೇಟಿ ಮಾಡಿ ಬೀಜ ಗೊಬ್ಬರಗಳನ್ನು ಖರೀದಿಸುವಾಗ ಜಾಗೃತರಾಗಿರಬೇಕು. ನಿಗದಿತ ದರಕ್ಕಿಂತ ಹೆಚ್ಚು ಕೊಟ್ಟು ಖರೀದಿ ಮಾಡಬಾರದು. ಮಳೆ ಪರಿಸ್ಥಿತಿ ನೋಡಿಕೊಂಡು ಗೊಬ್ಬರ ಹಾಗೂ ಔಷಧಿ ಕೊಡಬೇಕು ಎಂದು ಸಲಹೆ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!