Friday, August 12, 2022

Latest Posts

ಭದ್ರಾವತಿ ಅಭಿವೃದ್ಧಿಗೆ ಅನುದಾನ ನೀಡುತ್ತಿದ್ದರೂ ಅಲ್ಲಿನ ಶಾಸಕರು ಅಭಿವೃದ್ಧಿಗೆ ಸಹಕರಿಸುತ್ತಿಲ್ಲ: ಬಿ.ವೈ.ರಾಘವೇಂದ್ರ

ಹೊಸ ದಿಗಂತ ವರದಿ,  ಶಿವಮೊಗ್ಗ:

ಪಕ್ಷಪಾತ ಮಾಡದೆ ಭದ್ರಾವತಿ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುದಾನ ನೀಡುತ್ತಿದ್ದರೂ ಕೂಡ ಅಲ್ಲಿನ ಶಾಸಕರು ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಎಂದು ಸಂಸದ ಬಿ.ವೈ.ರಾಘವೇಂದ್ರ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭದ್ರಾವತಿಯಲ್ಲಿನ ಕೈಗಾರಿಕೆಗಳು ಅವಸಾನದ ಅಂಚಿಗೆ ಹೋಗಿದ್ದು, ಇದರಿಂದ ಆ ನಗರ ಆರ್ಥಿಕವಾಗಿ ದುರ್ಬಲವಾಗುತ್ತಿದೆ. ಅದನ್ನು ಪುನಶ್ಚೇತನಗೊಳಿಸಲು ಯತ್ನಿಸಲಾಗುತ್ತಿದ್ದರೂ ಕೂಡ ಶಾಸಕ ಸಂಗಮೇಶ್ ಸಹಕಾರ ನೀಡುತ್ತಿಲ್ಲ ಎಂದರು.

ಭದ್ರಾವತಿಯಲ್ಲಿ ಕಳೆದ ವಾರ ನಡೆದ ಘಟನೆಗೆ ಪ್ರತಿಕ್ರಿಯಿಸಿದ ಅವರು, ಸೋಲು ಗೆಲುವನ್ನು ಕ್ರೀಡಾ ಸ್ಪೂರ್ತಿಯಿಂದ ತೆಗೆದುಕೊಳ್ಳದ ಪರಿಣಾಮವಾಗಿ ರದ್ದಾಂತ ಮಾಡಲಾಗಿದೆ. ಹುಮ್ಮಸ್ಸಿನಲ್ಲಿ ಜೈ ಶ್ರೀರಾಮ್ ಕೂಗಲಾಗಿತ್ತು. ಇದನ್ನು ಪಾಕಿಸ್ಥಾನದಲ್ಲಿ ಕೂಗಬೇಕಿತ್ತಾ ಎಂದು ಪ್ರಶ್ನಿಸಿದರು.

ಸಹಜವಾಗಿಯೇ ಕ್ರೀಡಾಕೂಟ ನಡೆಸಲಾಗಿತ್ತು. ಆದರೆ ಕೊನೆಯ ಪಂದ್ಯಾವಳಿ ನಡೆಯುವಾಗ ಸಂಗಮೇಶ್ ಕಡೆಯವರು ಕೈಗೆ ಸ್ಟೀಲ್ ಪಂಚ್‌ಗಳನ್ನು ಹಾಕಿಕೊಂಡು ಬಂದಿದ್ದರು. ಘೋಷಣೆ ನೆಪ ಮಾಡಿಕೊಂಡು ಹಲ್ಲೆ ನಡೆಸಿದ್ದಾರೆಂಬುದು ಗೊತ್ತಾಗಿದೆ ಎಂದರು.

ಇದನ್ನೇ ವಿರೋಧ ಪಕ್ಷದ ನಾಯಕರು ವಿಧಾನ ಸಭೆಯಲ್ಲಿ ದೊಡ್ಡದು ಮಾಡುತ್ತಿದ್ದಾರೆ. ಬಜೆಟ್ ತಯಾರಿ, ಒದು ದೇಶ ಒಂದು ಚುನಾವಣೆ ಸೇರಿದಂತೆ ರಾಜ್ಯದಲ್ಲಿ ಬೇರೆ ಸಮಸ್ಯೆಗಳಿದ್ದು, ಅವುಗಳ ಬಗ್ಗೆ ಚರ್ಚಿಬೇಕಿದ್ದ ವಿರೋಧ ಪಕ್ಷದ ಅದಕ್ಕೆಲ್ಲಾ ಅವಕಾಶ ನೀಡದೆ ಭದ್ರಾವತಿ ಘಟನೆಯನ್ನೇ ದೊಡ್ಡದು ಮಾಡಿದ್ದಾರೆ ಎಂದು ದೂರಿದರು.

ವಿಧಾನ ಸಭಾಧ್ಯಕ್ಷರ ಸ್ಥಾನ ದೊಡ್ಡದು. ಅವರು ನೀಡುವ ಆದೇಶ ಪಾಲನೆ ಮಾಡಬೇಕಿರುವುದು ಮಾರ್ಷಲ್‌ಗಳ ಪಾತ್ರ ಅತೀ ಮುಖ್ಯವಾಗಿದೆ. ಆದೇಶ ಪಾಲನೆ ಮಾಡಿದ ಮಾರ್ಷಲ್‌ಗಳಿಗೆ ಧಮಿಕಿ ಹಾಕುವ ಕೆಲಸ ಪ್ರತಿಪಕ್ಷದ ನಾಯಕರು ಮಾಡಿದ್ದಾರೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss