Thursday, August 18, 2022

Latest Posts

ಅಭಿವೃದ್ಧಿ ಕೆಲಸಗಳಿಗೆ ಎಲ್ಲರ ಸಹಕಾರ ಅಗತ್ಯ: ಸಿ.ಟಿ.ರವಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ವರದಿ,ಚಿಕ್ಕಮಗಳೂರು :

ಅಭಿವೃದ್ಧಿ ಕೆಲಸಗಳಿಗೆ ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.
ರಾಮನಹಳ್ಳಿಯಲ್ಲಿ 2ನೇ ಹಂತದ ಅಂಬೇಡ್ಕರ್ ಭವನವನ್ನು ಉದ್ಘಾಟಿಸಿ ಡಾ.ಬಿ.ಆರ್.ಅಂಬೇಡ್ಕರ್ ರವರ ಭಾವಚಿತ್ತಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ರಾಮನಹಳ್ಳಿಯಲ್ಲಿ ಮೊದಲನೇ ಹಂತದ ಅಂಬೇಡ್ಕರ್ ಭವನ ಪೂರ್ಣಗೊಂಡು, 2ನೇ ಹಂತಕ್ಕೆ ಬೇಡಿಕೆ ಇಟ್ಟಿದ್ದರು, ಅದಕ್ಕೆ ಬೇಕಾದ ಅನುದಾನ ನೀಡಿ ಇಂದು ಆ ಕಾಮಗಾರಿಯು ಪೂರ್ಣಗೊಂಡಿದೆ, ಮುಂದಿನ ದಿನಗಳಲ್ಲಿ ಅಡುಗೆಮನೆ, ಶೌಚಾಲಯ, ನೀರಿನ ವ್ಯವಸ್ಥೆ ಮತ್ತು ಇಂಟರ್ ಲಾಕನ್ನು ಅಳವಡಿಸಿ ಆಧುನಿಕತೆಗೆ ತಕ್ಕಂತೆ ಭವನಕ್ಕೆ ಸ್ಪರ್ಶ ನೀಡಲು ಅನುದಾನ ನೀಡುತ್ತೇನೆ, ಈ ಭಾಗದ ಜನರು ಈ ಭವನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಬೇಕೆಂದು ತಿಳಿಸಿದರು.
ಎರಡು ವರ್ಷಗಳಿಂದ ಕೋವಿಡ್ ಸಂಕಷ್ಟಕ್ಕೆ ಒಳಗಾಗಿ ಯಾವುದೆ ಸಾರ್ವಜನಿಕ ಆಚರಣೆ ಉತ್ಸವಗಳಿಗೆ ಅನಿವಾರ್ಯವಾಗಿ ನಿರ್ಬಂಧ ಏರಿಸಲಾಗಿತ್ತು, ಕೊರೋನಾ ಕಡಿಮೆಯಾದ ತಕ್ಷಣವೇ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಒಳಗೊಂಡಂತೆ ಮತ್ತೋಮ್ಮೆ ಚಿಕ್ಕಮಗಳೂರು ಹಬ್ಬವನ್ನು ಮಾಡುತ್ತೇವೆ ಎಂದರು.
ನಾವೆಲ್ಲ ಒಂದು ನಾವೆಲ್ಲ ಹಿಂದು ಎಂದು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 1893ರಲ್ಲಿ ಮೊದಲಬಾರಿಗೆ ಬಾಲಗಂಗಾಧರನಾಥ ತಿಲಕ್ ರವರು ಮೊದಲ ಬಾರಿಗೆ ಮಹಾರಾಷ್ಟ್ರದ ಪುಣೆಯಲ್ಲಿ ಸಾರ್ವಜನಿಕವಾಗಿ ಗಣೇಶೋತ್ಸವ ಆಚರಣೆಗೆ ಚಾಲನೆ ನೀಡಿದರು, ಯಾವುದೆ ಜಾತಿ ಮತ ಇಲ್ಲದೆ ಪ್ರತಿಯೊಬ್ಬರು ಜಗತಿನಾದ್ಯಂತ ಏಕತಾ ಮನೋಭಾವನೆಯಿಂದ ಗಣೇಶೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂದು ತಿಳಿಸಿದರು.
ಈ ಸಂದಂರ್ಭದಲ್ಲಿ ಮಾಜಿ ನಗರಸಭೆ ಸದಸ್ಯರುಗಳಾದ ಸುಧೀರ್, ರಾಜಶೇಖರ್, ಕೆಂಚಯ್ಯ, ಯೋಧರಾದ ಮೋಹನ್, ನಗರ ಎಸ್.ಸಿ ಮೋರ್ಚಾದ ಅಧ್ಯಕ್ಷರಾದ ನರಸಿಂಹಮೂರ್ತಿ ವಾರ್ಡಿನ ಸುರೇಶ್, ಪುಟ್ಟಸ್ವಾಮಿ, ದೇವರಾಜ್ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!