ಹಾಸನದಲ್ಲಿ ಭಕ್ತಿಸಾಗರ: 2ನೇ ದಿನವೂ ಹಾಸನಾಂಬೆ ದರ್ಶನಕ್ಕೆ ಮುಗಿಬಿದ್ದ ಜನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಹಾಸನ ಜಿಲ್ಲೆಯ ಅಧಿದೇವತೆ ಹಾಸನಾಂಬ ದೇವಿಯ ದರ್ಶನೋತ್ಸವವು ಎರಡನೇ ದಿನವೂ ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ಮುಂದುವರಿದಿದ್ದು, ದೇವಸ್ಥಾನದ ಆವರಣ ಭಕ್ತಸಾಗರದಿಂದ ಕಿಕ್ಕಿರಿದು ತುಂಬಿಹೋಗಿದೆ. ಕೇವಲ ಹಗಲಷ್ಟೇ ಅಲ್ಲ, ದೇವಿಯ ದರ್ಶನಕ್ಕಾಗಿ ಸಾವಿರಾರು ಭಕ್ತರು ಮಧ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಶನಿವಾರ ಬೆಳಿಗ್ಗೆ 6 ಗಂಟೆಯಿಂದಲೇ ದೇವಿಯ ಗರ್ಭಗುಡಿಯ ಬಾಗಿಲು ತೆರೆದು ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. 300 ರೂ. ಗೆ ವಿಶೇಷ ದರ್ಶನದ ಟಿಕೆಟ್ ಸಾಲಿನಲ್ಲಿಯೂ ಭಕ್ತರು ಸುದೀರ್ಘವಾಗಿ ಸಾಲುಗಟ್ಟಿ … Continue reading ಹಾಸನದಲ್ಲಿ ಭಕ್ತಿಸಾಗರ: 2ನೇ ದಿನವೂ ಹಾಸನಾಂಬೆ ದರ್ಶನಕ್ಕೆ ಮುಗಿಬಿದ್ದ ಜನ