Wednesday, July 6, 2022

Latest Posts

ಕೊನೆಯ ಎರಡು ಹಂತದ ಪ್ರಯೋಗಕ್ಕೆ ಸಿದ್ಧವಾಗ್ತಿದೆ ‘ಬಯೋಲಾಜಿಕಲ್-ಇ’ ಕೊರೋನಾ ಲಸಿಕೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹೈದರಾಬಾದ್ ಮೂಲದ ಲಸಿಕಾ ಉತ್ಪಾದನ ಕಂಪನಿ ಬಯೋಲಾಜಿಕಲ್-ಇ ಕೊರೋನಾ ಲಸಿಕೆಯ 2 ಮತ್ತು3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಡಿಸಿಜಿಐ ಅನುಮತಿ ನೀಡಿದೆ.
ಈ ಬಯೋಲಾಜಿಲ್ ಇ ಲಸಿಕೆಯು 5-18 ವರ್ಷದ ಮಕ್ಕಳಿಗೆ ಸಿದ್ಧಪಡಿಸಲಾಗಿದೆ. ಕೆಲವು ನಿಯಮಗಳನುಸಾರ ದೇಶದ 10 ಕಡೆಗಳಲ್ಲಿ ಎರಡು ಮತ್ತು ಮೂರನೇ ಹಂತದ ಪ್ರಯೋಗಗಳು ನಡೆಯಲಿದೆ.
ಈ ಲಸಿಕೆ ಕುರಿತು ತಜ್ಞರ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಡಿಸಿಜಿಐ ಅನುಮತಿ ನೀಡಿದೆ.
ಜೂನ್ ನಲ್ಲಿ ಆರೋಗ್ಯ ಇಲಾಖೆಯು ಬಯೋಲಾಜಿಲ್ ಇ ಸಂಸ್ಥೆ ಅಭಿವೃದ್ಧಿಪಡಿಸಿದ ಲಸಿಕೆಯ 30 ಕೋಟಿ ಡೋಸ್ ಗಳನ್ನು ವರ್ಷಾಂತ್ಯದೊಳಗೆ ಕಾಯ್ದಿರಿಸುವಂತೆ ಒಪ್ಪಂದ ಮಾಡಿಕೊಂಡಿತ್ತು.
ಸದ್ಯ ದೇಶದಲ್ಲಿ 2-18 ವರ್ಷದ ಮಕ್ಕಳಿಗೆ ಭಾರತ್ ಬಯೋಟೆಕ್ ತಯಾರಿಸಿರುವ ಕೋವಾಕ್ಸಿನ್ ಲಸಿಕೆಯ ಎರಡು ಹಾಗೂ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಯುತ್ತಿದ್ದು, 12 ರಿಂದ 18 ವರ್ಷದೊಳಗಿನವರಿಗಾಗಿ ಜಿಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಜಿಕೋವ್- ಡಿ ಲಸಿಕೆ ತುರ್ತು ಬಳಕೆಗೆ ಅನುಮತಿ ಪಡೆದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss