Tuesday, August 16, 2022

Latest Posts

ಬೊಜ್ಜು ಕಡಿಮೆಯಾಗಲು ಪ್ರತಿನಿತ್ಯ ಮಾಡಿ ಧನುರಾಸನ! ಇದರಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ?

ಯೋಗಾಸನಗಳಲ್ಲಿ ತೂಕ ಇಳಿಸೋಕೆ ಧನುರಾಸನ ಹೆಚ್ಚು ಪರಿಣಾಮಕಾರಿಯಾಗಲಿದೆ. ಇದು ಬಿಲ್ಲಿನ ಆಕಾರವನ್ನು ಹೋಲಲಿದ್ದು, ಅನೇಕ ಆರೋಗ್ಯ ಸಮಸ್ಯೆಗಳಿಗೆ ಔಷಧ ರೂಪದಲ್ಲಿ ಕೆಲಸ ಮಾಡುತ್ತದೆ. ಹಾಗಿದ್ದರೆ ಈ ಆಸನ ಮಾಡುವುದರಿಂದ ಏನೆಲ್ಲಾ ಲಾಭಗಳಿವೆ ನೋಡಿ

  • ಜೀರ್ಣಕ್ರಿಯೆಗೆ ಸಹಾಯ ಮಾಡಲಿದೆ.
  • ಮಲಬದ್ಧತೆ ಸಮಸ್ಯಯನ್ನು ನಿವಾರಿಸುತ್ತದೆ.
  • ರಕ್ತ ಸಂಚಲನ ಹೆಚ್ಚಲಿದೆ.
  • ಸ್ನಾಯುಗಳನ್ನು ಬಲಗೊಳಿಸಲಿದೆ.
  • ಒತ್ತಡ ನಿವಾರಣೆ
  • ಖತುಚಕ್ರ ಸಮತೋಲನ
  • ಕಿಡ್ನಿ ಹಾಗೂ ಲಿವರ್ ಕೆಲಸ ಚುರುಕುಗೊಳ್ಳಲಿದೆ.
  • ಆಸ್ತಮಾ ಸೇರಿದಂತೆ ಉಸಿರಾಟ ಸಮಸ್ಯೆ ನಿವಾರಣೆ

ಧನುರಾಸನ ಮಾಡೋದು ಹೇಗೆ?

  • ಹೊಟ್ಟೆಯ ಮೇಲೆ ಮಲಗಿಕೊಳ್ಳಿ
  • ನಂತರ ನಿಮ್ಮ ಕಾಲುಗಳನ್ನು ಹಿಂಬದಿಯಿಂದ ಮೇಲೆತ್ತಿ, ಕೈಗಳ ಸಹಾಯದಿಂದ ಪಾದವನ್ನು ಹಿಡಿದುಕೊಳ್ಳಿ.
  • ಹೀಗೆ 12-20 ಸೆಕೆಂಡ್ ಗಳ ಕಾಲ ದೀರ್ಘ ಉಸಿರಾಟ ನಡೆಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss