ಹೊಸದಿಗಂತ ಡಿಜಿಟಲ್ ಡೆಸ್ಕ್:
ಧನುಷ್ ಹಾಗೂ ಐಶ್ವರ್ಯಾ ರಜನಿಕಾಂತ್ ದೂರಾಗಿರುವ ಬಗ್ಗೆ ಸ್ವತಃ ಇವರಿಬ್ಬರೇ ಮಾಹಿತಿ ನೀಡಿದ್ದಾರೆ.
ಆದರೆ ಇದೀಗ ಧನುಷ್ ತಂದೆ ಈ ಬಗ್ಗೆ ಮಾತನಾಡಿದ್ದು, ಅವರಿಬ್ಬರ ಮಧ್ಯೆ ವಿಚ್ಛೇದನ ಆಗಿಲ್ಲ, ಸಣ್ಣಪುಟ್ಟ ಜಗಳ ಅಷ್ಟೆ ಎಂದು ಹೇಳಿದ್ದಾರೆ.
ಧನುಷ್ ತಂದೆ ಕಸ್ತೂರಿ ರಾಜ ತಮಿಳಿನ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
ಇದೊಂದು ಫ್ಯಾಮಿಲಿ ಜಗಳ ಅಷ್ಟೆ, ಗಂಡ ಹೆಂಡತಿ ಅಂದಮೇಲೆ ಸಣ್ಣ ಪುಟ್ಟ ವೈಮನಸ್ಸು ಸಾಮಾನ್ಯ ಎಂದು ಹೇಳಿದ್ದಾರೆ.
ಈ ಮಾತನ್ನು ಕೇಳಿರುವ ಅಭಿಮಾನಿಗಳು ಹಾಗಿದ್ರೆ ಐಶ್ವರ್ಯಾ ಹಾಗೂ ಧನುಷ್ ಮತ್ತೆ ಒಂದಾಗುತ್ತಾರಾ ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ.