ಹೊಸ ದಿಗಂತ ವರದಿ, ಮಂಡ್ಯ :
ಪಂಡಿತ್ ದಿನದಯಾಳ್ ಉಪಾಧ್ಯಾಯರು ಒಬ್ಬ ಉದಾತ್ತ ಆದರ್ಶವ್ಯಕ್ತಿ ಮತ್ತು ಪ್ರಚಂಡ ಸಂಘಟನಾ ಸಾಮಾರ್ಥ್ಯವನ್ನು ಹೊಂದಿದ್ದವರಾಗಿದ್ದರು. ಕೇವಲ ವ್ಯಕ್ತಿಯಾಗಿರದೇ ಪ್ರತಿಯೊಂದು ರಂಗದಲ್ಲೂ ಅತ್ಯದ್ಭುತ ಪ್ರತಿಭೆಯನ್ನು ಹೊಂದಿದ್ದರು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ವಿಜಯಕುಮಾರ್ ಬಣ್ಣಿಸಿದರು.
ತಾಲೂಕಿನ ಹನಕೆರೆ ಶಕ್ತಿಕೇಂದ್ರದ ಕಚ್ಚೀಗೆರೆ ಬೂತ್ನಲ್ಲಿ ಬಿಜೆಪಿ ವತಿಯಿಂದ ನಡೆದ ಪಂಡಿತ್ ಧೀನ್ ದಯಾಳ್ ಉಪಾಧ್ಯಾಯರ 105ನೇ ಜನ್ಮ ದಿನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾಮಾಜಿಕ ಚಿಂತಕ, ಅರ್ಥಶಾಸಜ್ಞ, ಶಿಕ್ಷಣತಜ್ಞ, ರಾಜಕಾರಣಿ, ಬರಹಗಾರ, ಪತ್ರಕರ್ತ, ವಾಗ್ಮಿ, ಸಂಘಟನ ಚತುರರು ಮುಂತಾದ ಹಲವು ಸರ್ವಶ್ರೆಷ್ಠ ಗುಣಗಳ ಆಕರವಾಗಿದ್ದರು ಎಂದು ಹೇಳಿದರು.
ಭಾರತೀಯ ಜನ ಸಂಘವು ಆರಂಭವಾದಾಗ, ಅದು ರಾಷ್ಟ್ರೀಯ ಸ್ವಯಂಸೇವಕ ಸಂಘ ದೀನ್ದಯಾಳ್ ಅವರನ್ನು ತನ್ನಡೆಗೆ ಕರೆದುಕೊಂಡಿತು. 1953 ರಲ್ಲಿ ಶ್ಯಾಮಪ್ರಸಾದಮುಖರ್ಜಿಯವರ ಮರಣಾನಂತರ ಭಾರತೀಯ ಜನತಾ ಪಕ್ಷವನ್ನು ಮುನ್ನಡೆಸುವ ಹೊಣೆಗಾರಿಕೆ ದೀನ್ದಯಾಳರ ಹೆಗಲಿಗೆ ಬಿತ್ತು. ತಮಗೆ ಒದಗಿ ಬಂದ ಜವಾಬ್ದಾರಿಯನ್ನು ಅತ್ಯಂತ ಉತ್ಕಟತೆಯಿಂದ ನಿರ್ವಹಿಸಿ, ಪಕ್ಷದ ಆದರ್ಶ ಮತ್ತು ತತ್ವಗಳನ್ನು ಜೊತೆಗೂಡಿಸಿಕೊಂಡು ಭಾರತೀಯ ಜನಸಂಘವನ್ನು ರೂಪಿಸಿದರು ಎಂದು ವಿವರಿಸಿದರು.
ಕಸಬಾ ಮಹಾಶಕ್ತಿ ಕೇಂದ್ರದ ಏಳು ಶಕ್ತಿಕೇಂದ್ರಗಳಾದ ಉಮ್ಮಡಹಳ್ಳಿಘಿ, ಹನಕೆರೆ, ಹಳೇಬೂದನೂರು, ಬಿ.ಗೌಡಗೆರೆ, ಗೋಪಾಲಪುರ, ಸಾತನೂರು, ಕೋಣನಹಳ್ಳಿ ಸೇರಿದಂತೆ ವಿವಿಧ ಧೀನ್ದಯಾಳ್ರ ಜನ್ಮದಿನೋತ್ಸವ ಆಚರಿಸಲಾಯಿತು.