ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕನ್ನಡದ ಚಿತ್ರರಂಗದ ಜನಪ್ರಿಯ ಖಳ ನಟ ಧೀರೇಂದ್ರ ಗೋಪಾಲ್ ಪತ್ನಿ ಸುನಂದಮ್ಮ ಇಂದು ಮಧ್ಯಾಹ್ನ ವಿಧಿವಶರಾಗಿದ್ದಾರೆ.
ತೀವ್ರ ಪ್ರಮಾಣದಲ್ಲಿ ಹೃದಯಾಘಾತವಾದ ಹಿನ್ನೆಲೆ ಅವರು ಇಂದು ತಮ್ಮ ಮನೆಯಲ್ಲಿ ಮೃತಪಟ್ಟಿದ್ದಾರೆ. ನಗರದ ದಾಲ್ಮೀಯಾ ಘಾಟ್ ನಲ್ಲಿ ಇಂದು ಸಂಜೆ ಅಂತ್ಯಕ್ರಿಯೆ ನಡೆದಿದೆ.
ದಾವಣಗೆರೆ ಜಿಲ್ಲೆಯ ಹರಿಹರದ ಸ್ವಗೃಹದಲ್ಲಿ ಇಬ್ಬರು ಪುತ್ರರ ಜೊತೆ ಸುನಂದಮ್ಮ ವಾಸವಾಗಿದ್ದರು. ಸುನಂದಮ್ಮ ರಂಗ ಕಲಾವಿದೆ ಆಗಿದ್ದು, ಸುನಂದಮ್ಮ ಹಾಗೂ ಧಿರೇಂದ್ರ ಗೋಪಾಲ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು.