ಮಾಧವನ್‌ ಅಭಿನಯದ ʼಧೋಖಾ-ರೌಂಡ್ ಡಿ ಕಾರ್ನರ್ʼ ಚಿತ್ರದ ಟ್ರೈಲರ್ ಬಿಡುಗಡೆ: ಸಿನಿಪ್ರಿಯರ ಮೆಚ್ಚುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಬಾಲಿವುಡ್‌ ಸಿನಿ ಅಂಗಳದಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಆರ್. ಮಾಧವನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ʼಧೋಖಾ-ರೌಂಡ್ ಡಿ ಕಾರ್ನರ್ʼ ಟ್ರೈಲರ್ ಅನ್ನು ಟಿ-ಸೀರೀಸ್ ಅನಾವರಣಗೊಳಿಸಿದೆ.
ಬಿಡುಗಡೆಯಾಗಿರುವ ಟ್ರೇಲರ್‌ ಸಾಕಷ್ಟು ರೋಚಕತೆಯಿಂದ ಕೂಡಿದ್ದು, ಈ ಚಿತ್ರ ಮಧವನ್‌ ಗೆ ಮತ್ತೊಂದು ಹಿಟ್‌ ನೀಡಲಿದೆ ಎಂದು ಚಿತ್ರಭಿಮಾನಿಗಳಿಂದ ಪ್ರಶಂಸೆ ಪಡೆಯುತ್ತಿದೆ. ನಟರಾದ ಆರ್. ಮಾಧವನ್, ಖುಶಾಲಿ ಕುಮಾರ್, ದರ್ಶನ್ ಕುಮಾರ್ ಮತ್ತು ಅಪರಶಕ್ತಿ ಖುರಾನಾ ಅವರು ಥ್ರಿಲ್ಲರ್ ಚಿತ್ರ “ಧೋಖಾ” ನಲ್ಲಿ ನಟಿಸಿದ್ದಾರೆ.

ಚಿತ್ರವನ್ನು ಕೂಕಿ ಗುಲಾಟಿ ನಿರ್ದೇಶಿಸಿದ್ದು, ನಗರವೊಂದರಲ್ಲಿ ವಾಸವಿರುವ ದಂಪತಿಗಳ ಜೀವನದಲ್ಲಿ ಒಂದು ದಿನದಲ್ಲಿ ಸಂಭವಿಸುವ ವಿಚಿತ್ರ ಘಟನೆಗಳು ಅವರ ಜೀವನವನ್ನು ಹೇಗೆ ಬದಲಾಯಿಸಿಬಿಡುತ್ತವೆ ಎಂಬುದು ಕಥೆಯ ಹೂರಣ.  ಪ್ರತಿ ಪಾತ್ರದ ಸಂಕೀರ್ಣತೆಯನ್ನು ಎತ್ತಿ ತೋರಿಸುವ ತಿರುವುಗಳು ಮತ್ತು ಆ ತಿರುವುಗಳೊಂದಿಗೆ ಎದುರಾಗುವ ಅನಿರೀಕ್ಷಿತ ರಹಸ್ಯ ವಿದ್ಯಮಾನಗಳು ಚಿತ್ರದುದ್ದಕ್ಕೂ ಇರಲಿವೆ ಎಂದು ಚಿತ್ರತಂಡ ಹೇಳಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!