Monday, July 4, 2022

Latest Posts

ಮೆಗಾ ಹರಾಜಿನಲ್ಲಿ ಧೋನಿಯೇ ನಮ್ಮ ಮೊದಲ ರೀಟೈನ್: ಚೆನ್ನೈ ಸೂಪರ್ ಕಿಂಗ್ಸ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಐಪಿಎಲ್ ನಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ 4ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಆದ್ರೆ, ಮುಂಬರುವ ಐಪಿಎಲ್‌ನಲ್ಲಿಯೂ ಧೋನಿ ಆಡುತ್ತಾರಾ ಇಲ್ವಾ ಎಂಬ ಬಗ್ಗೆ ಪ್ರಶ್ನೆಗೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಅಧಿಕಾರಿಯೊಬ್ಬರು ಸ್ಪಷ್ಟನೆ ನೀಡಿದ್ದಾರೆ.
ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕಾರಿಯೊಬ್ಬರು, ಮುಂಬರುವ ಐಪಿಎಲ್‌ನಲ್ಲಿಯೂ ಧೋನಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಗಿ ಆಡಲಿದ್ದಾರೆ. ಮೆಗಾ ಹರಾಜಿನಲ್ಲಿ ಧೋನಿಯನ್ನು ಉಳಿಸಿಕೊಳ್ಳುವುದೇ ನಮ್ಮ ಮೊದಲ ಆದ್ಯತೆ ಆಗಿದೆ ಎಂದರು.
ಮೆಗಾ ಹರಾಜಿನಲ್ಲಿ ರೀಟೆನ್ಶನ್ ಕಾರ್ಡ್ ಇರಲಿದೆ. ಎಷ್ಟು ರೀಟೆನ್ಶನ್ ಕಾರ್ಡ್ ಇರಲಿದೆ ಎಂಬುದು ಖಚಿತವಾಗಿಲ್ಲ. ಆದರೆ ಪ್ರಾಮಾಣಿಕವಾಗಿ ನಾವು ಹೇಳುವುದೇನೆಂದರೆ ಮೊದಲ ರೀಟೆನ್ಶನ್ ಕಾರ್ಡನ್ನು ನಾವು ಬಳಸುವುದು ಎಂಎಸ್ ಧೋನಿ ಮೇಲೆ. ಈ ಹಡಗಿಗೆ ಧೋನಿ ನಾಯಕತ್ವದ ಅಗತ್ಯವಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss