ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, June 25, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಎಲ್ಲ ಆಟಗಾರರು ಸುರಕ್ಷಿತವಾಗಿ ಮನೆಗೆ ತಲುಪಿದ ಬಳಿಕ ನಾನು ಹೋಗುವೆ ಎಂದ ಧೋನಿ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಯೋ ಬಬಲ್​ನಲ್ಲಿ ಕೊರೋನಾ ಕಾಣಿಸಿಕೊಂಡ ಹಿನ್ನೆಲೆ ಐಪಿಎಲ್​ ಮುಂದೂಡಲ್ಪಟ್ಟಿದ್ದು, ಇದೀಗ ಎಲ್ಲ ಆಟಗಾರರನ್ನು ಜೋಪಾನವಾಗಿ ತವರಿಗೆ ಮರಳಿಸುವ ಕೆಲಸ ನಡೆಯುತ್ತಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೂಡ ತನ್ನ ಆಟಗಾರರನ್ನು ತವರಿಗೆ ಕಳುಹಿಸುವ ವಿಚಾರದಲ್ಲಿ ನಡೆಸಿದ ವರ್ಚುಯಲ್ ಸಭೆಯಲ್ಲಿ, ಧೋನಿ ತಾವೂ ಕೊನೆಯವರಾಗಿ ಮನೆಗೆ ತೆರಳುತ್ತೇನೆ. ಮೊದಲು ತಂಡದ ಆಟಗಾರರು ಮತ್ತು ಸಹಾಯಕ ಸಿಬ್ಬಂದಿ ಮನೆಗೆ ಕಳುಹಿಸಿ ಎಂದು ಸಹ ಆಟಗಾರರ ಬಗ್ಗೆ ಕಾಳಜಿ ಮೆರೆದಿದ್ದಾರೆ.
‘​ ತಾವೂ ಹೋಟೆಲ್​ನಿಂದ ಕೊನೆಯ ವ್ಯಕ್ತಿಯಾಗಿ ಹೋಗುವೆ. ಮೊದಲು ವಿದೇಶಿ ಆಟಗಾರರು ಹೋಗಬೇಕು, ನಂತರ ಭಾರತದ ಆಟಗಾರರು ತೆರಳಲಿ. ನಾನು ಎಲ್ಲ ಆಟಗಾರರು ಸುರಕ್ಷಿತವಾಗಿ ಮನೆಗೆ ತಲುಪಿದ್ದಾರೆ ಎಂದು ತಿಳಿದ ಮೇಲೆ ನಾಳೆ (ಗುರುವಾರ) ಮನೆಗೆ ಹೋಗುತ್ತೇನೆ ಎಂದು ಆಡಳಿತ ಮಂಡಳಿಗೆ ತಿಳಿಸಿದರೆಂದು ಸಿಎಸ್​ಕೆ ಸದಸ್ಯರೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.​
ಸಿಎಸ್​ಕೆ ಭಾರತೀಯರಿಗಾಗಿ ದೆಹಲಿಯಿಂದ 10 ಸೀಟಿನ ಚಾರ್ಟೆರ್​ ಪ್ಲೈಟ್​ ಏರ್ಪಾಡು ಮಾಡಿತ್ತು. ಬುಧವಾರ ಬೆಳಗ್ಗೆ ರಾಜ್​ಕೋಟ್​ ಮತ್ತು ಮುಂಬೈಗೆ ಆಟಗಾರರನ್ನು ಬಿಡಲಾಗಿತ್ತು. ನಂತರ ಸಂಜೆ ಬೆಂಗಳೂರು ಮತ್ತು ಚೆನ್ನೈಗೆ ಆಟಗಾರರನ್ನು ತಲುಪಿಸಲಾಗಿತ್ತು. ಇದೀಗ ಹೋಟೆಲ್​ನಲ್ಲಿರುವ ಧೋನಿ ಗುರುವಾರ ಸಂಜೆ ರಾಂಚಿಗೆ ತೆರಳಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss