ಕಡಿಮೆಯಾಗಿಲ್ಲ ಧೋನಿ ಬ್ರ್ಯಾಂಡ್ ವ್ಯಾಲ್ಯೂ, ಒಂದೇ ವಾರದಲ್ಲಿ ಮೂರು ಒಪ್ಪಂದಕ್ಕೆ ಸಹಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಒಂದೇ ವಾರದಲ್ಲಿ ಮಹೇಂದ್ರ ಸಿಂಗ್ ಧೋನಿ ಮೂರು ಜಾಹೀರಾತುಗಳಿಗೆ ಸಹಿ ಮಾಡಿದ್ದಾರೆ.
ಹೌದು, ಧೋನಿ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ರೂ ಅವರ ಫೇಮ್ ಸ್ವಲ್ಪವೂ ಕಮ್ಮಿಯಾದಂತಿಲ್ಲ.
ಇದಕ್ಕೆ ನಿದರ್ಶನ ಎನ್ನುವಂತೆ ಧೋನಿ ಒಂದೇ ವಾರದಲ್ಲಿ ಮೂರು ಬ್ರಾಂಡ್‌ಗಳ ಜಾಹೀರಾತಿಗೆ ಸಹಿ ಹಾಕಿದ್ದಾರೆ.
ಖಾಸಗಿ ಹೌಸಿಂಗ್ ಕಂಪನಿ, ಬಿಸ್ಕೆಟ್ ಕಂಪನಿ ಜೊತೆ ಒಪ್ಪಂದ ನವೀಕರಣ ಹಾಗೇ ಹೊಸತಾಗಿ ಇನ್ಶೂರೆನ್ಸ್ ಒಂದರ ಜಾಹೀರಾತಿಗೆ ಮಾಹಿ ಸಹಿ ಮಾಡಿದ್ದಾರೆ.

I am like a kid who wants to play under MS Dhoni': Rising star labels CSK  as 'personal favourite' ahead of mega-auction | Cricket - Hindustan Timesಎರಡು ವರ್ಷದ ಹಿಂದೆಯೇ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರು. ಸದ್ಯದಲ್ಲೇ ಐಪಿಎಲ್‌ಗೂ ವಿದಾಯ ಹೇಳುತ್ತಾರೆ ಎಂದು ಹೇಳಲಾಗ್ತಿದೆ. ಸದ್ಯ ಧೋನಿ ಸಾಮಾಜಿಕ ಜಾಲತಾಣಗಳಿಂದ ದೂರ ಇದ್ದಾರೆ. ಫ್ರೀ ಟೈಮ್‌ನ್ನು ತಮ್ಮ ಕುಟುಂಬದ ಜೊತೆ ಫಾರ್ಮ್ ಹೌಸ್‌ನಲ್ಲಿ ಧೋನಿ ಕಳೆಯುತ್ತಾರೆ. ಹೀಗೆಲ್ಲಾ ಇದ್ದರೂ ಧೋನಿ ಬ್ರ್ಯಾಂಡ್ ವ್ಯಾಲ್ಯೂ ಮಾತ್ರ ಕಡಿಮೆಯಾಗಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!