ಐಪಿಎಲ್​ಗೂ ಧೋನಿ ವಿದಾಯ?: ಕುತೂಹಲ ಹೆಚ್ಚಿಸಿದ ಫೇಸ್​ಬುಕ್ ಪೋಸ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕ್ರಿಕೆಟ್​ ಲೋಕದಲ್ಲಿ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಕೇಳದವರಿಲ್ಲ. ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವ ಧೋನಿ ಈಗ ಐಪಿಎಲ್‌ನಲ್ಲಿ ಮಾತ್ರ ಆಡುತ್ತಿದ್ದಾರೆ.

ಅದೇ ರೀತಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುವ ಧೋನಿ, ಒಂದಿಲ್ಲೊಂದು ವಿಚಾರದಿಂದ ಸಖತ್ ಸುದ್ದಿಯಾಗುತ್ತಿರುತ್ತಾರೆ. ಕೆಲವೊಮ್ಮೆ ಆಘಾತಕ್ಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೂಲಕ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡುತ್ತಾರೆ. ಅದಕ್ಕೆ ತಾಜಾ ಉದಾಹರಣೆ ಎಂದರೆ ಅದು ಅವರ ಕ್ರಿಕೆಟ್ ಬದುಕಿನ ವಿದಾಯ. ಇದಕ್ಕಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪ್ರಕಟಿಸುವ ಮೂಲಕ ಧೋನಿ ಕ್ರಿಕೆಟ್​ಗೆ ವಿದಾಯ ಹೇಳಿಬಿಟ್ಟಿದ್ದರು.ಇದೀಗ ಫೇಸ್​ಬುಕ್​ನಲ್ಲಿ ಮಾಡಿರುವ ಪೋಸ್ಟೊಂದು ಅಭಿಮಾನಿಗಳಿಗೆ ಆತಂಕ ಹೆಚ್ಚುವಂತೆ ಮಾಡಿದೆ.

ಹೌದು, ಸೆಪ್ಟೆಂಬರ್ 24 ರಂದು ತಮ್ಮ ಅಧಿಕೃತ ಫೇಸ್‌ಬುಕ್ ಪುಟದಲ್ಲಿ ಹಠಾತ್ ಪೋಸ್ಟ್ ಮಾಡಿರುವ ಧೋನಿ, ಅಭಿಮಾನಿಗಳ ಆತಂಕ ಮತ್ತು ಊಹಾಪೋಹಗಳಿಗೆ ಕಾರಣರಾಗಿದ್ದಾರೆ. ಸೆಪ್ಟೆಂಬರ್ 25 ಅಂದರೆ ಭಾನುವಾರದಂದು ಫೇಸ್‌ಬುಕ್‌ನಲ್ಲಿ ಲೈವ್ ಬರುವುದಾಗಿ ಹೇಳಿಕೊಂಡಿದ್ದಾರೆ. ಆ ಪೋಸ್ಟ್​ನಲ್ಲಿ, ಮಧ್ಯಾಹ್ನ 2 ಗಂಟೆಗೆ ನಾನು ಲೈವ್​ ಬರಲಿದ್ದು, ಅದರಲ್ಲಿ ನಾನು ನಿಮ್ಮೊಂದಿಗೆ ಕೆಲವು ರೋಚಕ ಸುದ್ದಿಗಳನ್ನು ಹಂಚಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದಾರೆ. ಧೋನಿಯ ಈ ಹೇಳಿಕೆಯೆ ಈಗ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.

ಧೋನಿ ಈ ಫೇಸ್ಬುಕ್ ಪೋಸ್ಟ್​ ನೋಡಿರುವ ಅಭಿಮಾನಿಗಳಲ್ಲಿ ಮಹೀ ನಾಳೆ ಏನನ್ನು ಹೇಳಲಿದ್ದಾರೆ ಎಂಬ ಕುತೂಹಲ ಮೂಡಿದೆ. ಅಲ್ಲದೆ ಧೋನಿ ಈಗಾಗಲೇ ಎರಡು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದು, ನಾಳಿನ ಫೇಸ್ಬುಕ್ ಲೈವ್​ನಲ್ಲಿ ಮತ್ತ್ಯಾವ ಬಾಂಬ್ ಸಿಡಿಸುತ್ತಾರೆ ಎಂಬ ಪ್ರಶ್ನೆಗಳು ಅಭಿಮಾನಿಗಳ ಮನಸಲ್ಲಿ ಮೂಡಿದೆ. ಅಲ್ಲದೆ ಧೋನಿ ಐಪಿಎಲ್‌ನಿಂದ ನಿವೃತ್ತಿ ಘೋಷಿಸಲಿದ್ದಾರಾ ಎಂಬ ಆತಂಕವೂ ಅಭಿಮಾನಿಗಳಲ್ಲಿ ಹೆಚ್ಚುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!