ರಾಜ್ಯ ಬಾಡ್ಮಿಂಟನ್ ತಂಡಕ್ಕೆ ದಿಯಾ ಭೀಮಯ್ಯ ಆಯ್ಕೆ

ಹೊಸದಿಗಂತ ವರದಿ ಮಡಿಕೇರಿ:

ರಾಜ್ಯದ ಪ್ರಥಮ ಶ್ರೇಯಾಂಕಿತ ಆಟಗಾರ್ತಿಯಾದ, ಮೂಲತಃ ಕೊಡಗಿನ ಬೊಪ್ಪಂಡ ದಿಯಾ ಭೀಮಯ್ಯ ರಾಜ್ಯ ಬ್ಯಾಡ್ಮಿಂಟನ್ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಡಿ.26ರಿಂದ 30ರವರೆಗೆ ಒಡಿಸ್ಸಾದ ಭುವನೇಶ್ವರದಲ್ಲಿ ನಡೆಯಲಿರುವ 34ನೇ ಸಬ್ ಜೂನಿಯರ್ ಯೋನೆಕ್ಸ್ ಸನ್ ರೈಸ್ ರಾಷ್ಟ್ರೀಯ ಬಾಡ್ಮಿಂಟನ್ ಪಂದ್ಯಾವಳಿಯಲ್ಲಿ ದಿಯಾ ಭೀಮಯ್ಯ ಅವರು 15 ವರ್ಷದೊಳಗಿನ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗಗಳೆರಡರಲ್ಲಿಯೂ ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಮೈಸೂರಿನ ಪ್ರಗತಿ ಎಲೈಟ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಯಾಗಿರುವ ದಿಯಾ ಭೀಮಯ್ಯ, ಮೈಸೂರಿನ ಸ್ಪೋರ್ಟ್ಸ್ ಪಾರ್ಕ್’ನಲ್ಲಿ ಮೇದುರ ಅರುಣ್ ಪೆಮ್ಮಯ್ಯ ಹಾಗೂ ಬಿ.ಪಿ.ಭೀಮಯ್ಯ ಅವರ ಬಳಿ ತರಬೇತಿ ಪಡೆಯುತ್ತಿದ್ದು, ಇವರು ಮಡಿಕೇರಿಯ ದೇಚೂರಿನ ಬೊಪ್ಪಂಡ ಕುಸುಮಾ ಹಾಗೂ ಭೀಮಯ್ಯ ದಂಪತಿಯ ಪುತ್ರಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!