Monday, August 8, 2022

Latest Posts

‘ರತ್ನನ್ ಪ್ರಪಂಚ’ಕ್ಕೆ ನಾಯಕಿಯಾಗಲು ನಟಿ ರಮ್ಯಾಗೆ ಆಫರ್ ಬಂದಿತ್ತಂತೆ…!

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಡಾಲಿ ಧನಂಜಯ ಅಭಿನಯಿಸಿರುವ ಸಿನಿಮಾ ‘ರತ್ನನ್ ಪ್ರಪಂಚ’ ಚಿತ್ರ ವೀಕ್ಷಿಸಿದ ಮೋಹಕತಾರೆ ರಮ್ಯಾ ಪಾಸಿಟಿವ್ ರೆಸ್ಪಾನ್ಸ್ ಕೊಟ್ಟಿದ್ದಾರೆ.
ಈ ಹಿಂದೆ ರತ್ನನ್ ಪ್ರಪಂಚ ಸಿನಿಮಾದ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಡಿಸಿದ್ದ ನಟಿ ರಮ್ಯಾ, ಈಗ ಈ ಚಿತ್ರಕ್ಕೆ ನಟಿಯಾಗುವಂತೆ ನನಗೆ ಆಫರ್ ಬಂದಿತ್ತು ಎಂಬ ಅಚ್ಚರಿಯ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ.
ಕಳೆದ ಕೆಲವು ತಿಂಗಳಿನಿಂದ ಸಿನಿಮಾರಂಗಕ್ಕೆ ಮತ್ತೆ ಬರುವ ಬಗ್ಗೆ ಒಲವು ತೋರಿಸುತ್ತಿರುವ ರಮ್ಯಾ, ಈಗ ರತ್ನನ್ ಪ್ರಪಂಚ ಸಿನಿಮಾ ನೋಡುವಾಗ ಈ ಸಿನಿಮಾದಲ್ಲಿ ನಾಯಕಿ ಪಾತ್ರ ಮಾಡುವಂತೆ ನನಗೆ ಆಫರ್​ ನೀಡಲಾಗಿತ್ತು. ನಾನೇನು ಮಿಸ್​ ಮಾಡಿಕೊಂಡೆ ಅಂತ ನೋಡೋಣ ಎಂದು ಬರೆದುಕೊಂಡಿದ್ದಾರೆ.
ಈ ಚಿತ್ರದ ಪ್ರಮುಖ ಪಾತ್ರಗಳಲ್ಲರುವ ನಟಿ ಉಮಾಶ್ರೀ, ಪ್ರಮೋದ್, ಶ್ರುತಿ, ವೈನಿಧಿ, ಅನು ಪ್ರಭಾಕರ್, ರವಿಶಂಕರ್, ಅಚ್ಯುತ್ ಕುಮಾರ್, ಪ್ರಮೋದ್ ಎಲ್ಲರೂ ಬ್ರಿಲಿಯಂಟ್ ಆಗಿ ನಟಿಸಿದ್ದಾರೆ. ರೆಬಾ ಮೋನಿಕಾ ಅವರು, ನಾನು ನಿಮಗಿಂತ ಚೆನ್ನಾಗಿ ನಟಿಸುತ್ತಿರಲ್ಲಿಲ್ಲ. ಕಾರ್ತಿಕ್​ ಗೌಡ ಮತ್ತು ಯೋಗಿ ಜಿ. ರಾಜ್​ ಮುಡಿಗೆ ಇನ್ನೊಂದು ಗರಿ ಸೇರಿದೆ. ನಿರ್ದೇಶಕ ರೋಹಿತ್​ ಪದಕಿ ಅವರ ಇಡೀ ತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ ರಮ್ಯಾ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss