ಕ್ವಾಲಿಫೈಯರ್ ಪಂದ್ಯದಲ್ಲಿ ರೂಲ್ಸ್ ಬ್ರೇಕ್ ಮಾಡಿದ್ರಾ ಧೋನಿ?: ಫೈನಲ್​ ಮ್ಯಾಚ್ ಗೆ ಆಗ್ತಾರಾ ಬ್ಯಾನ್?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಐಪಿಎಲ್​ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದು ಫೈನಲ್ ಪ್ರವೇಶಿಸಿದೆ. ಆದ್ರೆ ಇಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ತೋರಿಸಿದ ಅತೀ ಬುದ್ಧಿವಂತಿಕೆ ಇದೀಗ ಅವರಿಗೆ ತಿರುಗುಬಾಣವಾಗುವ ಸಾಧ್ಯತೆಯಿದೆ.

ಹೌದು , ಏಕೆಂದರೆ ಗುಜರಾತ್ ಟೈಟಾನ್ಸ್​ ವಿರುದ್ಧದ ಪಂದ್ಯದ ವೇಳೆ ಅಂಪೈರ್ ಜೊತೆ ಧೋನಿ ವಾಗ್ವಾದ ನಡೆಸಿದ್ದು, ಮ್ಯಾಚ್ ರೆಫರಿ ಗಂಭೀರವಾಗಿ ಪರಿಗಣಿಸಿದೆ.

ಗುಜರಾತ್ ಟೈಟಾನ್ಸ್ ಇನಿಂಗ್ಸ್​​ನ 16ನೇ ಓವರ್​ ಅನ್ನು ಧೋನಿ ಯುವ ವೇಗಿ ಮಥೀಶ ಪತಿರಾಣಗೆ ನೀಡಿದ್ದರು. ಆದರ ಅದಾಗಲೇ ಮೈದಾನದಿಂದ 9 ನಿಮಿಷಗಳ ಕಾಲ ಹೊರಗಿದ್ದ ಪತಿರಾಣ ಅವರನ್ನು ಬೌಲಿಂಗ್ ಮಾಡಲು ಅಂಪೈರ್ ತಡೆದರು. ಈ ವೇಳೆ ಧೋನಿ ವಾಗ್ವಾದ ನಡೆಸಿದ್ದಾರೆ.

ನಿಯಮಗಳ ಪ್ರಕಾರ ಓರ್ವ ಆಟಗಾರ ಮೈದಾನದಿಂದ ಹೊರಗುಳಿದ ಸಮಯದಷ್ಟೇ ಸಮಯ ಮೈದಾನದಲ್ಲಿರಬೇಕಾಗುತ್ತದೆ. ಅಂದರೆ ಮಾತ್ರ ಅವರು ಬೌಲಿಂಗ್​ಗೆ ಅರ್ಹರಾಗಿರುತ್ತಾರೆ. ಆದರೆ ಪತಿರಾಣ ಬೌಲಿಂಗ್ ಮಾಡಲು ಬಂದಾಗ ಕೇವಲ 4 ನಿಮಿಷಗಳಾಗಿತ್ತು. ಈ ಹೀಗಾಗಿ ಬೌಲಿಂಗ್ ಮಾಡಲು ಅಂಪೈರ್ ತಡೆದಿದ್ದಾರೆ.

ಆದರೆ ಇಲ್ಲಿ ಧೋನಿ ಲೆಗ್ ಅಂಪೈರ್ ಹಾಗೂ ಸ್ಟ್ರೈಟ್ ಅಂಪೈರ್​ಗಳ ಜೊತೆ ನಿಯಮಗಳ ಬಗ್ಗೆ ಚರ್ಚಿಸಿದರು. ಈ ಚರ್ಚೆಯ ಮೂಲಕ 4 ನಿಮಿಷಗಳ ಆಟವನ್ನು ವ್ಯರ್ಥ ಮಾಡಿದ್ದರು. ಇದರೊಂದಿಗೆ ಮಥೀಶ ಪತಿರಾಣ ಅವರು ಫೀಲ್ಡ್​ನಲ್ಲಿರಬೇಕಾದ ಸಮಯ ಕೂಡ ಪೂರ್ಣಗೊಂಡಿತು.ಅಂಪೈರ್ ಹೇಳಿದ ನಿಯಮದ ಪ್ರಕಾರವೇ ಪತಿರಾಣ ಅವರಿಂದ ಧೋನಿ ಬೌಲಿಂಗ್ ಮಾಡಿಸಿದ್ದರು.

ಆದ್ರೆ ಧೋನಿಯ ಈ ನಡೆಯನ್ನು ಕಾಮೆಂಟೇಟರ್​ಗಳಾದ ಸೈಮನ್ ಡೌಲ್, ಸುನಿಲ್ ಗಾವಸ್ಕರ್, ಹರ್ಷ ಬೋಗ್ಲೆ ​ಆಕ್ರೋಶ ವ್ಯಕ್ತಪಡಿಸಿದ್ದರು.

ಅತ್ತ ಮ್ಯಾಚ್ ರೆಫರಿ ಕೂಡ ಅಂಪೈರ್ ಜೊತೆಗಿನ ಧೋನಿಯ ವಾಗ್ವಾದವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ 5 ನಿಮಿಷಗಳ ಆಟವನ್ನು ವ್ಯರ್ಥ ಮಾಡಿದ ಆರೋಪದ ಜೊತೆಗೆ ಧೋನಿ ಸ್ಲೋ ಓವರ್ ರೇಟ್​ ಶಿಕ್ಷೆಗೂ ಗುರಿಯಾಗಿದ್ದಾರೆ. ಅಂದರೆ ಸಿಎಸ್​ಕೆ ತಂಡವು ನಿಗದಿತ ಸಮಯದೊಳಗೆ 20 ಓವರ್​ಗಳನ್ನು ಪೂರ್ಣಗೊಳಿಸಿರಲಿಲ್ಲ. ಹೀಗಾಗಿ ಇದಕ್ಕೂ ಕೂಡ ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.ಅತ್ತ ಲೀಗ್ ಹಂತದಲ್ಲಿ ಸ್ಲೋ ಓವರ್​ಗೆ ದಂಡಕ್ಕೆ ಗುರಿಯಾಗಿದ್ದ ಧೋನಿ ಇದೀಗ ಮತ್ತೆ ಅದೇ ತಪ್ಪನ್ನು ಪುನರಾವರ್ತಿಸಿದ್ದಾರೆ. ಇದರ ಜೊತೆಗೆ ಪಂದ್ಯಕ್ಕೆ ಅಡಚಣೆಯನ್ನುಂಟು ಮಾಡಿ ಸಮಯ ವ್ಯರ್ಥ ಮಾಡಿದ ಆರೋಪಕ್ಕೂ ಕೂಡ ಗುರಿಯಾಗಿದ್ದಾರೆ.

ಈ ಕಾರಣ ಧೋನಿಗೆ ದಂಡ ವಿಧಿಸಲಾಗುತ್ತದೆಯೇ ಅಥವಾ ನಿಷೇಧ ಹೇರಲಾಗುತ್ತದೆಯೇ ಕಾದುನೋಡಬೇಕಿದೆ. ಒಂದು ವೇಳೆ 1 ಪಂದ್ಯಕ್ಕೆ ನಿಷೇಧ ಹೇರಿದರೆ ಧೋನಿ ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಾಗುವುದಿಲ್ಲ. ಹಾಗಾಗಿ ಮ್ಯಾಚ್ ರೆಫರಿ ತೀರ್ಮಾನ ಏನಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!