Thursday, August 18, 2022

Latest Posts

‘ವಿಕ್ರಾಂತ್‌ ರೋಣ’ ಸಿನಿಮಾಗಾಗಿ ಎರಡೇ ದಿನದಲ್ಲಿ ಕನ್ನಡ ಕಲಿತ್ರಾ ಬಾಲಿವುಡ್‌ನ ಜಾಕ್ವೆಲಿನ್‌?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕಿಚ್ಚ ಸುದೀಪ್‌ ನಟನೆಯ ಬಹು ನಿರೀಕ್ಷಿತ ಸಿನಿಮಾ ‘ವಿಕ್ರಾಂತ್‌ ರೋಣ’ಗಾಗಿ ಬಾಲಿವುಡ್‌ನ ಜಾಕ್ವೆಲಿನ್‌ ಫರ್ನಾಂಡಿಸ್‌ ಕನ್ನಡ ಕಲಿತಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ವಿಕ್ರಾಂತ್‌ ರೋಣ ಸಿನಿಮಾದಲ್ಲಿ ಜಾಕ್ವೆಲಿನ್‌ ಒಂದು ಸಾಂಗ್ ಗೆ ಡಾನ್ಸ್ ಮಾತ್ರ ಮಾಡುತ್ತಾರೆ ಎಂದು ಈ ಹಿಂದೆ ಸುದ್ದಿಯಾಗಿತ್ತು. ಆದರೆ ಕೆಲವೊಂದಿಷ್ಟು ದೃಶ್ಯಗಳಿಗೂ ಈ ಬೆಡಗಿ ಬಣ್ಣ ಹಚ್ಚಿದ್ದಾರಂತೆ. ಅದಕ್ಕಾಗಿ ಅವರು ಕನ್ನಡವನ್ನು ಕಲಿತು ನಟಿಸಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಫರ್ನಾಂಡಿಸ್‌ ತಮ್ಮ ಪಾತ್ರದ ಶೂಟಿಂಗ್ ಗಾಗಿ ಬೆಂಗಳೂರಿಗೆ ಬಂದು, ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಈ ಬಗ್ಗೆ ನಟ ಸುದೀಪ್ ಸೇರಿದಂತೆ ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜಾಕ್ವೆಲಿನ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ‘ಸಿನಿಮಾದಲ್ಲಿ ನನ್ನೊಂದಿಗೆ ಹೆಜ್ಜೆ ಹಾಕಿ ಹಾಡಿಗೆ ಇನ್ನಷ್ಟು ಎನರ್ಜಿಯನ್ನು ತಂದುಕೊಟ್ಟಿರುವುದಕ್ಕೆ ಧನ್ಯವಾದಗಳು. ನೀವು ಡಾನ್ಸ್ ಮಾಡುವುದನ್ನು ನೋಡಿ ನನಗೂ ಡಾನ್ಸ್ ಮಾಡಲು ಪ್ರೇರಣೆ ಸಿಕ್ಕಿದೆ. ನಮ್ಮ ಚಿತ್ರದಲ್ಲಿ ನೀವು ಭಾಗಿಯಾಗಿರುವುದಕ್ಕೆ ಧನ್ಯವಾದಗಳು ಜಾಕ್ವೆಲಿನ್’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!