spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ವಿಜಯ್ ದೇವರಕೊಂಡ ನೋಡೋಕೆ ಅಮೆರಿಕಕ್ಕೆ ಹಾರಿದ್ರಾ ರಶ್ಮಿಕಾ ಮಂದಣ್ಣ?

- Advertisement -Nitte

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ದೇವರಕೊಂಡ ಆನ್‌ಸ್ಕ್ರೀನ್‌ನಲ್ಲಿ ಸೂಪರ್ ಹಿಟ್ ಜೋಡಿ.
ಅಂತೆಯೇ ಅವರು ಆಫ್‌ಸ್ಕ್ರೀನ್‌ನಲ್ಲಿಯೂ ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಗುಸುಗುಸು ಎಲ್ಲೆಡೆ ಹರಿದಾಡ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಇವರಿಬ್ಬರೂ ಕೂಡ ನಡೆದುಕೊಳ್ಳುತ್ತಾರೆ.
ಪುಷ್ಪಾ, ಮಿಷನ್ ಮಜ್ನು ಹಾಗೂ ಗುಡ್ ಬೈ ಸಿನಿಮಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿರೋ ರಶ್ಮಿಕಾಗೆ ಮನೆಗೆ ಹೋಗೋಕೆ ಕೂಡ ಟೈಮ್ ಸಿಕ್ಕಿಲ್ಲ.
ಹಬ್ಬಗಳನ್ನೆಲ್ಲಾ ಸೆಟ್‌ನಲ್ಲೇ ಕಳೆದಿದ್ದಾರೆ. ಆದರೆ ಈ ಬ್ಯುಸಿ ಶೆಡ್ಯೂಲ್ ಮಧ್ಯದಲ್ಲಿ ರಶ್ಮಿಕಾ ಅಮೆರಿಕಕ್ಕೆ ಹಾರಿದ್ದಾರೆ.
ವಿಜಯ್ ದೇವರಕೊಂಡ ಲೈಗರ್ ಸಿನಿಮಾ ಶೂಟಿಂಗ್ ಕೂಡ ಅಮೆರಿಕದಲ್ಲಿಯೇ ನಡೆಯುತ್ತಿದೆ. ಇದರಿಂದ ರಶ್ಮಿಕಾ ವಿಜಯ್ ನೋಡೋಕೆ ಹೋಗ್ತಿದ್ದಾರೆ ಎನ್ನಲಾಗಿದೆ. ಆದರೆ ಇದು ನಿಜವೋ ಇಲ್ವೋ ಅವರಿಬ್ಬರೇ ಹೇಳಬೇಕಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss