Saturday, July 2, 2022

Latest Posts

ಛೀ..ಛೀ ವಿಶ್ವದ ಅತ್ಯಂತ‌ ದುಬಾರಿ ಕಾಫಿ ಕಾಡುಬೆಕ್ಕಿನ‌ ಮಲದಿಂದ ತಯಾರಾಗುತ್ತಂತೆ!

  • ಹಿತೈಷಿ

ಕಾಫಿ ಕ್ರೇಜ್ ಯಾರಿಗಿಲ್ಲ ಹೇಳಿ. ಬೆಳಗ್ಗೆ ಎದ್ದ ಕೂಡಲೇ ಒಂದು ಗ್ಲಾಸ್ ಕಾಫಿ ಹೊಟ್ಟೆಗೆ ಹೋಗಿಲ್ಲ ಅಂದ್ರೆ ದಿನವೇ ಪ್ರಾರಂಭ ಆಗೋದಿಲ್ಲ. ಅದರಲ್ಲೂ ಫಿಲ್ಟರ್ ಕಾಫಿ, ಕ್ಯಾಪಿಚೀನೋ, ಇನ್ಸ್ಟೆಂಟ್ ಕಾಫಿ, ಕೋಲ್ಡ್ ಕಾಫಿ ಎಲ್ಲಾ ಬಂದ ಮೇಲೆ ಇದರ ಬೇಡಿಕೆ ವಿಶ್ವದಲ್ಲೇ ಹೆಚ್ಚು. 9ನೇ ಶತಮಾನದಲ್ಲಿ ಯುರೋಪ್ ನಲ್ಲಿ ಪ್ರಾರಂಭವಾದ ಕಾಫಿ ಉತ್ಪನ್ನ ಇದೀಗ ಜಗತ್ತಿನಾದ್ಯಂತ ಬಳಕೆಗೆ ಬಂದಿದೆ.

ಇಂದು ಕಾಫಿಯಲ್ಲಿನ ಮತ್ತೊಂದು ವಿಶೇಷ ತಳಿ ಬಗ್ಗೆ ಪರಿಚಯ ಮಾಡಿಕೊಳ್ಳೋಣ.. ಅದರ ಹೆಸರು ಕ್ಯಾಟ್ ಪೂಪ್ ಕಾಫಿ (ಕೋಪಿ ಲುವಕ್). ಅಂದ್ರೆ ಏನು ಗೊತ್ತಾ? ಬೆಕ್ಕಿನ ಮಲದಿಂದ ಮಾಡುವ ಕಾಫಿ ಅಂತ. ಛೀ.. ಹೆಸರು ಕೇಳಿದರೆ ವಾಕರಿಕೆ ಬರುತ್ತದೆ. ಆದರೆ ಇದನ್ನ ಬಾಯಿ ಚಪ್ಪರಿಸಿಕೊಂಡು ಕುಡಿಯುವ ಲಕ್ಷಾಂತರ ಮಂದಿ ಇದ್ದಾರೆ ಅಂದ್ರೆ ನಂಬುತ್ತೀರಾ?

ಹೌದು.. ಬೆಕ್ಕನ್ನೇ ಹೋಲುವ ಸಿವಿಟ್ ಎನ್ನುವ ಕಾಡುಬೆಕ್ಕಿನ ಮಲದಿಂದ ಈ ಕಾಫಿ ತಯಾರಾಗುತ್ತಂತೆ.

What is Cat Poop Coffee? (aka Kopi Luwak Coffee)

ಇದು ಮೊದಲು ಪ್ರಾರಂಭ ಆಗಿದ್ದು ಎಲ್ಲಿ?
ಈ ಕೋಪಿ ಲುವಕ್ ಅನ್ನು ಮೊದಲು ಇಂಡೋನೇಷಿಯಾದಲ್ಲಿ ಉತ್ಪಾದಿಸಿದ್ದರು. ಈಗ ಕರ್ನಾಟಕದ ಕೊಡಗಿನಲ್ಲೂ ಇದನ್ನು ತಯಾರಿಸಲಾಗುತ್ತಿದೆ. ಇದಕ್ಕೆ ಚೀನಾ, ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ ಏಷ್ಯಾ ಖಂಡದ ಅನೇಕ ರಾಷ್ಟ್ರಗಳಿಂದ ಬೇಡಿಕೆ ಇದೆ.

Wild Luwak Coffee / Civet Coffee Arabica 100 %(id:10516314). Buy Indonesia Civet Coffee, Coffee Arabica - EC21

ಹೇಗೆ ತಯಾರಿಸುತ್ತಾರೆ ಗೊತ್ತಾ?
ಮೊದಲಿಗೆ ಈ ಸಿವಿಟ್ ಬೆಕ್ಕುಗಳಿಗೆ ಕಾಫಿ ಬೀಜಗಳನ್ನು ತಿನ್ನಿಸುತ್ತಾರೆ. ಬಳಿಕ ಆ ಬೆಕ್ಕುವಿನಿಂದ ಹೊರಬರುವ ಮಲವನ್ನು ಸಂಸ್ಕರಿಸಿ ಈ ಕಾಫಿ ಬೀಜ ತಯಾರಿಸಲಾಗುತ್ತದೆ. ಮಲದ ಕಾಫಿ ಅಂತ ಇದಕ್ಕೆ ರುಚಿ ಇರಲ್ಲ ಅಂದುಕೊಳ್ಳಬೇಡಿ.. ಇದು ಸಖತ್ ಟೇಸ್ಟಿ ಹಾಗೂ ಪರಿಮಳ ಭರಿತವಾಗಿರುತ್ತೆ ಅಂತಾರಪ್ಪ.

What are the health benefits of civet coffee? - Quora

ಇದರ ಬೆಲೆ ಕೇಳಿದರೆ ನಿಬ್ಬೆರಗಾಗುತ್ತೀರಾ, ಏಕೆ ಗೊತ್ತಾ?
ಕ್ಯಾಟ್ ಪೂಪ್ ಕಾಫಿಗೆ ಗಲ್ಫ್ ರಾಷ್ಟ್ರಗಳು ಹಾಗೂ ಯುರೋಪಿಯನ್ ರಾಷ್ಟ್ರಗಳಲ್ಲಿ ಹೆಚ್ಚು ಬೇಡಿಕೆ ಇದ್ದು, ಕೆ.ಜಿ. ಕಾಫಿ ಪುಡಿಗೆ ಬರೋಬ್ಬರಿ 20,000 ರೂ. – 25,000 ರೂ. ವರೆಗೂ ಇರಲಿದೆ ಅಂದ್ರೆ ನಂಬಲೇಬೇಕು.

ಇದರಲ್ಲಿ ಹೆಚ್ಚು ಪೌಷ್ಠಿಕಾಂಶವಿದ್ದು, ಪ್ರಾಣಿಗಳ ಬಳಕೆ ಇರಲಿದೆ. ಅದರಲ್ಲೂ ಇದು ತುಂಬಾ ಕಡಿಮೆ ಪ್ರದೇಶದಲ್ಲಿ ತ್ಪಾದಿಸುತ್ತಾರೆ. ಬೆಕ್ಕುಗಳನ್ನು ಸಾಕುವುದು, ಮಲಗಳನ್ನು ಸಂಸ್ಕರಿಸುವುದಕ್ಕೆ ಹೆಚ್ಚು ಸಮಯ ಬೇಕು. ಹಾಗಾಗಿ ಇದು ತುಂಬಾ ಕಾಷ್ಟ್ಲಿಯಾಗಿರುತ್ತದೆ ಎನ್ನುತ್ತಾರೆ.

The Disturbing Secret Behind the World's Most Expensive Coffee

ಈ ಕಾಫಿಯಿಂದ ಏನು ಲಾಭ?
ಕ್ಯಾಟ್ ಪೂಪ್ ಕಾಫಿಯಲ್ಲಿ ಆರೋಗ್ಯಕ್ಕೆ ಅಗತ್ಯ ಪೌಷ್ಠಿಕಾಂಶ ಸಿಗಲಿದೆ ಅಂತಾರೆ ಅಮೆರಿಕ ತಜ್ಞರು. ಇದನ್ನು ಕುಡಿಯುವುದರಿಂದ ಹಲ್ಲುಗಳಿಗೆ ಶಕ್ತಿ ದೊರಕುತ್ತದೆ. ಕ್ಯಾನ್ಸರ್, ಮಧುಮೇಹ, ಸ್ನಾಯು ನೋವು ಸೇರಿದಂತೆ ಅನೇಕ ರೋಗಗಳು ದೂರಾಗುತ್ತದೆ. ಜೊತೆಗೆ ಕೂದಲ ಬೆಳವಣಿಗೆ ಹಾಗೂ ಸೌಂದರ್ಯ ವೃದ್ಧಿಸಿಕೊಳ್ಳಲು ಈ ಕಾಫಿ ಸಹಕಾರಿಯಾಗಲಿದೆ.

Tortured Brew : The Truth Behind Luwak Coffee | NOW! JAKARTA

ಸಿವಿಟ್ ಬೆಕ್ಕುಗಳನ್ನು ಹೇಗೆ ಸಾಕುತ್ತಾರೆ ಗೊತ್ತಾ?
ಕಾಫಿ ಉತ್ಪಾದನೆಗಾಗಿ ಈ ಬೆಕ್ಕುಗಳನ್ನು ಕಾಡಿನಿಂದ ತಂದು ಪಂಜರದೊಳಗೆ ಬಂಧಿಸಲಾಗುತ್ತದೆ. ಇದು ಕ್ರೂರ ರೂಪವಾದರೂ ಇದು ವ್ಯಾಪಾರಕ್ಕೆ ಇಡೀ ವಿಶ್ವದಲ್ಲಿ ಬಳಕೆಯಾಗುತ್ತಿದೆ.

From Dung to Coffee Brew With No Aftertaste - The New York Times

ವಿಶ್ವದಲ್ಲೇ ಅತ್ಯಂತ ದುಬಾರಿ ಕಾಫಿ ಎಂದೆ ಹೆಸರುವಾಸಿಯಾಗಿರುವ ಕ್ಯಾಟ್ ಪೂಪ್ ಅನ್ನು ಉತ್ಪಾದಿಸುವ ವಿಭಿನ್ನ ರೀತಿಯ ಪ್ರಯತ್ನ ಮಾಡುತ್ತಿರುವುದು ಹೆಮ್ಮೆಯ ವಿಚಾರ. ಆದರೆ ಪ್ರಾಣಿಗಳನ್ನು ಈ ರೀತಿ ಪಂಜರದೊಳಗೆ ಹಾಕಿ ಕೋಟ್ಯಾಂತರ ರೂ. ಗಳಿಸುವುದು ಎಷ್ಟರ ಮಟ್ಟಿಗೆ ಸರಿ ಅನ್ನೋದು ವೈಯಕ್ತಿಕ ಅಭಿಪ್ರಾಯಕ್ಕೆ ಬಿಟ್ಟಿರೋದು…

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss