spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, December 8, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಈಗಷ್ಟೆ ಊಟ ಮಾಡಿದ್ದೀರಾ? ಹಾಗಿದ್ರೆ ಈ ತಪ್ಪುಗಳನ್ನು ಯಾವ ಕಾರಣಕ್ಕೂ ಮಾಡಬೇಡಿ!

- Advertisement -Nitte

ಕೆಲವೊಮ್ಮೆ ಗೊತ್ತಿದ್ದು ಗೊತ್ತಿದ್ದು ತಪ್ಪು ಮಾಡುತ್ತವೆ. ಅವುಗಳಲ್ಲಿ ಈ ಊಟ ಮಾಡಿದ ತಕ್ಷಣ ಮಾಡುವ ಕೆಲವು ತಪ್ಪುಗಳು ಕೂಡ ಸೇರಿಕೊಳ್ಳುತ್ತದೆ. ಊಟ ಮಾಡಿದ ಕೂಡಲೇ ಮಲಗಬಾರದು ಎನ್ನುತ್ತಾರೆ. ಆದರು ಕೆಲವೊಮ್ಮೆ ಮಲಗಿ ಬಿಡುತ್ತದೆ. ಇನ್ಮುಂದೆ ಊಟ, ತಿಂಡಿ ಆದ ತಕ್ಷಣ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ. ಯಾವೆಲ್ಲ ತಪ್ಪುಗಳು ಇಲ್ಲಿದೆ ನೋಡಿ..

ನೀರು ಕುಡಿಬೇಡಿ…
 ಊಟ, ತಿಂಡಿ ಆದ ತಕ್ಷಣ ನೀವು ನೀರನ್ನು ಸೇವಿಸಿದರೆ ಜೀರ್ಣಕ್ರಿಯೆಗೆ ಪ್ರಯೋಜನವೇನೂ ಆಗದು, ಬದಲಿಗೆ ಇದು ಜೀರ್ಣರಸಗಳನ್ನು ತಿಳಿಯಾಗಿಸಿ ಇವುಗಳ ಪ್ರಭಾವವನ್ನು ಕುಂದಿಸಬಹುದು. ಅಲ್ಲದೇ ಜೀರ್ಣಾಂಗಗಳಲ್ಲಿ ಕಿಣ್ವಗಳು ಮತ್ತು ಆಮ್ಲಗಳನ್ನು ತಿಳಿಯಾಗಿಸಿ ಆಮ್ಲೀಯತೆಯನ್ನು ಉಂಟುಮಾಡಬಹುದು. ಹಾಗಾಗಿ ನೀರನ್ನು ಕುಡಿಯಬೇಡಿ.

ಮಲಗಬೇಡಿ..
ಹೊಟ್ಟೆ ತುಂಬುತ್ತಿದ್ದಂತೆಯೇ ನಿದ್ದೆ ಬಂದಂತಾಗುತ್ತದೆ. ಆದರೆ ಎಂದಿಗೂ ಹೊಟ್ಟೆ ತುಂಬಿದ  ತಕ್ಷಣ  ನಿದ್ದೆ ಮಾಡಬೇಡಿ. ಏಕೆಂದರೆ ನಿದ್ದೆ ಮಾಡಿದ್ದೆ ನಮ್ಮ ಜೀರ್ಣಕ್ರಿಯೆ ಸರಿಯಾಗಿ ಆಗುವುದಿಲ್ಲ. ನಾವು ಮಲಗಿದ ಭಂಗಿ  ಕಡೆ ಆಹಾರ ಹೋಗಿ ಕುಳಿತುಬಿಡುತ್ತದೆ. ಆಗ ಜೀರ್ಣ ಕ್ರಿಯೆ ಸರಿಯಾಗಿ ಆಗುವುದಿಲ್ಲ.

ಹಲ್ಲುಜ್ಜಬೇಡಿ…
ತುಂಬಾ ಜನ ಊಟ ಆದ ತಕ್ಷಣ ಹಲ್ಲುಜ್ಜುತ್ತಾರೆ. ಆದರೆ ಹೀಗೆ ಹಲ್ಲುಜ್ಜುವುದು ತಪ್ಪು. ನಮಗೆ ಹೊಟ್ಟೆ ತುಂಬಿದ ತಕ್ಷಣ ಲಾಲಾರಸ ಬಿಡುಗಡೆ ಪ್ರಮಾಣ ಹೆಚ್ಚಿರುತ್ತದೆ. ಹಲ್ಲುಜ್ಜಿದರೆ ಲಾಲಾರಸ ಬಿಡುಗಡೆ ಕುಂದುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಆಗುತ್ತದೆ.

ಹಣ್ಣು ತಿನ್ನಬೇಡಿ…
ಹಣ್ಣು ತಿನ್ನುವುದು ಒಳ್ಳೆಯ ಅಭ್ಯಾಸವೇ ಆದರೆ ಸರಿಯಾದ ಸಮಯಕ್ಕೆ ತಿಂದರೆ ಮಾತ್ರ ಒಳ್ಳೆಯದು. ಊಟ ಆದ ತಕ್ಷಣ ಹಣ್ಣು ತಿಂದರೆ ದೇಹದಲ್ಲಿ ಆಮ್ಲೀಯತೆಯ ಪ್ರಮಾಣ ಹೆಚ್ಚುತ್ತದೆ. ಹೀಗೆ ಮಾಡಿದರೆ ಎಸಿಡಿಟಿ ಆಗುತ್ತದೆ.

ಧೂಮಪಾನ, ಮದ್ಯಪಾನ
:
ಕೆಲವೊಬ್ಬರಿಗೆ ಊಟ ಆದ ತಕ್ಷಣ  ಧೂಮಪಾನ, ಮದ್ಯಪಾನ ಮಾಡುವ ಚಟವಿರುತ್ತದೆ. ಆದರೆ ಇದು ತಪ್ಪು. ಧೂಮಪಾನ, ಮದ್ಯಪಾನವೇ ಆರೊಗ್ಯಕ್ಕೆ ಹಾಳು ಅದರಲ್ಲಿಯೂ ಊಟದ ಬಳಿಕ ಮಾಡುವುದು ಮತ್ತೂ ಹಾಳು. ಅನ್ನನಾಳ, ಶ್ವಾಸನಾಳ ಮತ್ತು ಜೀರ್ಣಾಂಗಗಳ ಒಳಗೆ ಇಳಿಯುವಾಗ ಒಳಗೋಡೆಗಳಿಗೆ ಪ್ರಚೋದನೆ ನೀಡುತ್ತಾ ಹೋಗುತ್ತವೆ. ಪರಿಣಾಮವಾಗಿ IBS ಅಥವಾ ಹೊಟ್ಟೆಯುರಿ, ಹುಳಿತೇಗು, ಆಮ್ಲೀಯತೆ ಮೊದಲಾದವುಗಳನ್ನು ಉಂಟುಮಾಡುತ್ತವೆ.

ವ್ಯಾಯಾಮ:
ಊಟವಾದ ತಕ್ಷಣ ವ್ಯಾಯಾಮ ಮಾಡಬೇಡಿ. ದೇಹದ ಯಾವ ಕಸರತ್ತು ಮಾಡಬೇಡಿ. ತಿಂದ ಆಹಾರ ಜೀರ್ಣವಾದ ಮೇಲೆ  ವ್ಯಾಯಾಮ ಮಾಡಿ. ಹೊಟ್ಟೆ ತುಂಬಿದಾಗ ಬಹಳ ಓಡುವುದು, ನಡೆದಾಡುವುದು, ಸ್ವಿಮಿಂಗ್, ಯೋಗ ಇದಾವುದನ್ನೇ ಮಾಡಿದರೂ ದೇಹದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss