ಹೊಸ ದಿಗಂತ ವರದಿ,ತುಮಕೂರು:
ಡಿ.ಕೆ ಶಿವಕುಮಾರ್ ಬೇಜಾರಾಗಲು ಅವರ ಆಸ್ತಿ ಏನಾದರೂ ಬರೆಸಿಕೊಂಡಿದ್ದೇವಾ? ಇದೆಲ್ಲ ಸುಮ್ಮನೆ ಅಷ್ಟೇ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಸಹಕಾರಿ ಸಚಿವ ಕೆಎನ್ ರಾಜಣ್ಣ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ.
ಡಿನ್ನರ್ ಪಾರ್ಟಿ ವಿಚಾರದ ಕುರಿತು ತುಮಕೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿನ್ನರ್ ಪಾರ್ಟಿ ಕ್ಯಾನ್ಸಲ್ ಎಲ್ಲಿ ಆಗಿದೆ? ಮುಂದೂಡಿದ್ದೇವೆ ಅಷ್ಟೇ, ಕ್ಯಾನ್ಸಲ್ ಇಲ್ಲ. ಈಗಾಗಲೇ ಈ ಬಗ್ಗೆ ಪರಮೇಶ್ವರ್ ಹೇಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಮೊನ್ನೆ ನಡೆದಿರುವ ಡಿನ್ನರ್ ಪಾರ್ಟಿ ಬಗ್ಗೆ ಗೊಂದಲ ಆಗಿದೆ. ಆ ಗೊಂದಲದ ಜೊತೆಗೆ ಇನ್ನೊಂದು ಗೊಂದಲ ಆಗೋದು ಬೇಡ. ಅದನ್ನು ಮುಂದೂಡಬೇಕು ಅಂತ ಹೇಳಿದೆ, ಅದಕ್ಕೆ ಮುಂದೂಡಿದ್ದೇವೆ ಎಂದರು.