ಪ್ರತಿಭಟನೆಯಿಂದ ಹಿಂದೆ ಸರಿದಿಲ್ಲ, ಕರ್ತವ್ಯಕ್ಕೆ ಹಾಜರಾಗಿದ್ದೇವೇ ಅಷ್ಟೇ: ಕುಸ್ತಿಪಟು ಸಾಕ್ಷಿ ಮಲ್ಲಿಕ್, ಪುನಿಯಾ ಸ್ಪಷ್ಟನೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಸೋಮವಾರ ತಮ್ಮ ರೈಲ್ವೆ ಉದ್ಯೋಗಗಳಿಗೆ ಮರಳಿದ್ದಾರೆ.

ಇಬ್ಬರೂ ಕುಸ್ತಿಪಟುಗಳು ಮತ್ತೆ ಕೆಲಸಕ್ಕೆ ಸೇರುವ ಸುದ್ದಿ ಬೆಳಕಿಗೆ ಬಂದ ಕೂಡಲೇ, ಅವರು ಧರಣಿಯಿಂದ ಹಿಂದೆ ಸರಿದಿದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ ಇಬ್ಬರೂ ಕುಸ್ತಿಪಟುಗಳು ಟ್ವೀಟ್ ಮಾಡಿದ್ದಾರೆ.

ಟ್ವೀಟ್ ಮಾಡಿದ ಸಾಕ್ಷಿ, ‘ಈ ಸುದ್ದಿ ಸಂಪೂರ್ಣವಾಗಿ ತಪ್ಪು. ನ್ಯಾಯಕ್ಕಾಗಿ ಹೋರಾಟದಲ್ಲಿ, ನಮ್ಮಲ್ಲಿ ಯಾರೂ ಹಿಂದೆ ಸರಿದಿಲ್ಲ, ನಾವು ಸಹ ಹಿಂದೆ ಸರಿಯುವುದಿಲ್ಲ. ಸತ್ಯಾಗ್ರಹದ ಜೊತೆಗೆ ರೈಲ್ವೆಯಲ್ಲಿ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ. ನ್ಯಾಯ ಸಿಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ. ದಯವಿಟ್ಟು ಯಾವುದೇ ತಪ್ಪು ಸುದ್ದಿಯನ್ನು ಹರಡಬೇಡಿ’ ಎಂದಿದ್ದಾರೆ.

https://twitter.com/SakshiMalik/status/1665645066105544705?cxt=HHwWgoDT8ZrXx50uAAAA

ಇನ್ನು ‘ಚಳವಳಿಯನ್ನು ಹಿಂತೆಗೆದುಕೊಳ್ಳುವ ಸುದ್ದಿ ಕೇವಲ ವದಂತಿಯಾಗಿದ್ದು, ನಮಗೆ ಹಾನಿ ಮಾಡಲು ಈ ಸುದ್ದಿಗಳನ್ನು ಹರಡಲಾಗುತ್ತಿದೆ. ನಾವು ಹಿಂದೆ ಸರಿದಿಲ್ಲ ಅಥವಾ ಧರಣಿಯನ್ನು ಹಿಂತೆಗೆದುಕೊಂಡಿಲ್ಲ. ಮಹಿಳಾ ಕುಸ್ತಿಪಟುಗಳು ಎಫ್‌ಐಆರ್ ದಾಖಲಿಸಿದ್ದಾರೆ ಎಂಬ ಸುದ್ದಿ ಸುಳ್ಳು. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯುತ್ತದೆ’ ಎಂದು ಪುನಿಯಾ ಟ್ವೀಟ್ ಮಾಡಿದ್ದಾರೆ.
https://twitter.com/BajrangPunia/status/1665648629732737025?cxt=HHwWgoCw_dGmyZ0uAAAA

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!