ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾ ಸೋಂಕಿಗೆ ಬಲಿಯಾದ ಪ್ರೀತಿಯ ಅಪ್ಪ: ದುಃಖ ತಡೆಯಲಾಗದೇ ಚಿತೆಗೆ ಹಾರಿದ ಮಗಳು!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಕೊರೋನಾ ಸೋಂಕಿಗೆ ಪ್ರೀತಿಯ ತಂದೆ ಮೃತಪಟ್ಟಿರುವುದನ್ನು ಸಹಿಸಲಾಗದೇ ಮಗಳೊಬ್ಬಳು ತಂದೆಯ ಚಿತೆಗೆ ಹಾರಿರುವ ಹೃದಯ ಕಲಕುವ ಘಟನೆ ರಾಜಸ್ಥಾನದ ಬಾರ್ಮರ್ ಎಂಬಲ್ಲಿ ನಡೆದಿದೆ.
ಕೂಡಲೇ ಆಕೆಯನ್ನು ಚಿತೆಯಿಂದ ಹೊರ ತೆಗೆಯಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ದಾಮಾದರದಾಸ್‌(73) ಎಂಬುವವರು ಕೊರೋನಾ ಸೋಂಕಿಗೆ ಬಲಿಯಾಗಿದ್ದರು. ಅವರ ಅಂತ್ಯಕ್ರಿಯೆಗೆ ಅವಕಾಶ ನೀಡದಿದ್ದರೂ ಹಠ ಮಾಡಿಕೊಂಡು ಮಗಳು ಚಂದ್ರಕಲಾ ಹೋಗಿದ್ದಳು. ತಂದೆಯ ಚಿತೆ ಉರಿಯುತ್ತಿದ್ದಂತೆಯೇ ಚಂದ್ರಕಲಾ ಅದರಲ್ಲಿ ಜಿಗಿದು ಬಿಟ್ಟಿದ್ದಾಳೆ.

ತಕ್ಷಣ ಚಂದ್ರಕಲಾ ಅವರನ್ನು ರಕ್ಷಿಸಲಾಯಿತು. ದೇಹದ 70 % ಭಾಗ ಸುಟ್ಟಿದ್ದು,  ಚಿಕಿತ್ಸೆ ನೀಡಲಾಗುತ್ತಿದೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss