ಮಲಬದ್ಧತೆ, ಗಟ್ಟಿಯಾದ ಮಲ ವಿಸರ್ಜನೆ ಸಮಸ್ಯೆ ಇತ್ತ ಹೇಳಿಕೊಳ್ಳುವಂಥದ್ದಲ್ಲ, ಆದರೆ ಸುಮ್ಮನೆ ಇರೋದಕ್ಕೂ ಆಗೋದಿಲ್ಲ. ಗಟ್ಟಿಯಾದ ಮಲವಿಸರ್ಜನೆ ಸಮಸ್ಯೆಯನ್ನು ಹಾಗೆ ಬಿಟ್ಟರೆ ಮುಂದೆ ಅದು ಇನ್ನೊಂದು ಸಮಸ್ಯೆಗೆ ಕಾರಣವಾಗಬಹುದು. ಈ ಸಮಸ್ಯೆಗೆ ಮನೆ ಮದ್ದು ಇಲ್ಲಿದೆ..
ಹೊಟ್ಟೆಗೆ ಮಸಾಜ್ ಮಾಡಿ: ಸುತ್ತ ರೀತಿಯಲ್ಲಿ ಮಸಾಜ್ ಮಾಡುವುದರಿಂದ ಸರಿಯಾದ ಬವಲ್ ಮೂವ್ಮೆಂಟ್ಗಳು ಆಗುತ್ತವೆ, ಆಗಾಗ ಸರಿಯಾಗಿ ಮಸಾಜ್ ಮಾಡಿಕೊಳ್ಳಿ.
ಹೆಚ್ಚು ನೀರು: ಹೆಚ್ಚು ನೀರು ಕುಡಿಯದ ಅಭ್ಯಾಸ ಇರುವವರಿಗೆ ಈ ಸಮಸ್ಯೆ ಹೆಚ್ಚು. ನೀರು ಕುಡಿದರೆ ಮಲ ಸಾಫ್ಟ್ ಆಗುತ್ತದೆ. ಇದರಿಂದ ಪಾಸ್ ಮಾಡುವಾಗ ಯಾವುದೇ ಸಮಸ್ಯೆ ಆಗುವುದಿಲ್ಲ.
ಫೈಬರ್ ತಿನ್ನಿ: ಫೈಬರ್ ತಿನ್ನದೇ ಹೋದರೆ ಮಲ ವಿಸರ್ಜನೆಯಲ್ಲಿ ಸಮಸ್ಯೆಯಾಗೋದು ಗ್ಯಾರೆಂಟಿ. ಊಟದಲ್ಲಿ ಹೆಚ್ಚು ಫೈಬರ್ ಇರಲಿ.
ಫ್ಯಾಟ್ ತಿನ್ನಬೇಡಿ: ಖಾಲಿ ಹೊಟ್ಟೆಗೆ ಜಂಕ್ ಫುಡ್ ತಿನ್ನಬೇಡಿ. ಇದರಿಂದ ಸ್ಟೂಲ್ ಗಟ್ಟಿಯಾಗುತ್ತದೆ. ಕಡಿಮೆ ಫೈಬರ್ ಇರುವ ಆಹಾರ ನಿಮ್ಮ ಸಿಸ್ಟಮ್ನ್ನೇ ಬದಲಾಯಿಸುತ್ತದೆ.
ವ್ಯಾಯಾಮ: ಫಿಸಿಕಲ್ ಆಕ್ಟಿವಿಟಿ ಇಲ್ಲದೆ ಸರಿಯಾಗಿ ಮಲ ವಿಸರ್ಜನೆ ಆಗುತ್ತಿಲ್ಲ ಎಂದರೆ ತಪ್ಪು ನಮ್ಮದೇ ಆಗುತ್ತದೆ. ಮಲವಿಸರ್ಜನೆ ಸರಿಯಾಗಿ ಆಗಬೇಕು ಎಂದರೆ ದಿನವೂ ವ್ಯಾಯಾಮ ಮಾಡಿ.