ದಿನಭವಿಷ್ಯ| ಪ್ರೀತಿಯ ವಿಚಾರದಲ್ಲಿ ಇಂದು ಪೂರಕ ಬೆಳವಣಿಗೆ

ಮೇಷ
ಆಪ್ತರೊಂದಿಗೆ ದಿನ ಕಳೆಯುವ ಅವಕಾಶ. ವೃತ್ತಿ ಕಾರ್ಯಗಳು ಇಂದು ಹಿನ್ನೆಲೆಗೆ ಸರಿಯುತ್ತವೆ. ಆರ್ಥಿಕ ಮುಗ್ಗಟ್ಟು ನಿವಾರಣೆ, ಆರ್ಥಿಕ ಸಹಾಯ.

ವೃಷಭ
ನಿಮ್ಮ ಕಾರ್ಯವೈಖರಿ ಹಲವರ ಗಮನ ಸೆಳೆಯುವುದು. ಒತ್ತಡ ನಿವಾರಣೆ. ಬಯಸಿದ ವ್ಯಕ್ತಿಯೊಬ್ಬರ ಶ್ಲಾಘನೆ ನಿಮಗೆ ಅತ್ಯಂತ ಹರ್ಷ ನೀಡುವುದು.

ಮಿಥುನ
ಒತ್ತಡಗಳಿಂದ ಪಾರಾಗಲು ದಾರಿ ಹುಡುಕುವಿರಿ. ಆದರೆ ನಿಮಗೆ ಹೆಚ್ಚಿನ ಅವಕಾಶ ದೊರಕದು. ಮತ್ತದೇ ದಿನವಹಿ ಕಾರ್ಯದ ಜಂಜಾಟಗಳು.

ಕಟಕ
ಕೆಲವು ಪರಿಸ್ಥಿತಿಗಳನ್ನು ಎಂದಿನಂತೆ ನಿಭಾಯಿಸಲಾಗದು. ಅದಕ್ಕೆ ನೀವು ಭಿನ್ನ ದಾರಿ ಹುಡುಕಬೇಕು. ಸೂಕ್ತ ನೆರವೂ ಪಡೆದುಕೊಳ್ಳಿ. ಕೌಟುಂಬಿಕ ಸಹಕಾರ.

ಸಿಂಹ
ಪ್ರತಿಸ್ಪರ್ಧಿಗಳು ನಿಮ್ಮ  ಕುರಿತಂತೆ ಅಪಪ್ರಚಾರ ನಡೆಸುತ್ತಾರೆ. ಕೆಲಸಕ್ಕೆ ವಿಘ್ನ ತಂದೊಡ್ಡುತ್ತಾರೆ. ವ್ಯವಹಾರದಲ್ಲಿ ಹೆಚ್ಚು ಎಚ್ಚರ ವಹಿಸಬೇಕು. ಆರ್ಥಿಕ ಒತ್ತಡ.

ಕನ್ಯಾ
ಸಣ್ಣಪುಟ್ಟ ಹಿನ್ನಡೆಗಳಿಗೆ ನೀವು ಬಗ್ಗಬಾರದು. ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಿರಿ. ಖಂಡಿತಾ ನಿಮಗೆ ಯಶ ಸಿಗುವುದು. ಕೌಟುಂಬಿಕ ಸಮಾಧಾನ.

ತುಲಾ
ಪ್ರೀತಿಯ ವಿಚಾರದಲ್ಲಿ ನಿಮಗೆ ಪೂರಕ ಬೆಳವಣಿಗೆ. ಅಡ್ಡಿಯೊಂದು ತೊಲಗಿದ ನಿರಾಳತೆ. ಹಣಕಾಸು ಪರಿಸ್ಥಿತಿ ತುಸು ಸಂಕಷ್ಟ ತಂದೊಡ್ಡಬಹುದು.

ವೃಶ್ಚಿಕ
ನಿಮಗಿಂದು ಯಶಸ್ಸು ಕಾದಿದೆ. ಹಾಗಾಗಿ ಈ ದಿನವನ್ನು ಸದುಪಯೋಗ ಮಾಡಿ ಕೊಳ್ಳಿ. ಪೂರೈಸ ಬೇಕಾದ ವ್ಯವಹಾರ ಮುಗಿಸಿಕೊಳ್ಳಿ.

ಧನು
ನಿಮಗಿಂದು ಯಶಸ್ವೀ ದಿನ. ವೃತ್ತಿಯಲ್ಲಿ ಮತ್ತು ಖಾಸಗಿ ಬದುಕಲ್ಲಿ ನಿಮಗೆ ಪೂರಕ ಬೆಳವಣಿಗೆ. ಮಾನಸಿಕ ತುಮುಲ ನಿವಾರಣೆ.

ಮಕರ
ಸಾಮಾನ್ಯವಾಗಿ ಸಮಾಧಾನದ ವ್ಯಕ್ತಿಯಾದ ನೀವು ಇಂದು ಕೋಪದಿಂದ ಸಿಡಿಯುವ ಪ್ರಸಂಗ ಉದ್ಭವಿಸೀತು. ಪರಿಸ್ಥಿತಿ ಹದ ಮೀರದಿರಲಿ.

ಕುಂಭ
ವೃತ್ತಿಯಲ್ಲಿ ಮೇಲೇರಲು ನಿಮಗೆ ಆಪ್ತರಿಂದ ಸಹಾಯ ಒದಗುವುದು. ಸಣ್ಣ ಕ್ಲೇಶಗಳು ಬಾಧಿಸಿದರೂ ಅಪರಾಹ್ನದ  ಬಳಿಕ ನಿವಾರಣೆ.

ಮೀನ
ಸಂಬಂಧದಲ್ಲಿ ಹೊಂದಾಣಿಕೆ ಮುಖ್ಯ. ಆ ಮೂಲಕ ನೀವು ಸಂತೋಷ ಪಡೆಯಬಲ್ಲಿರಿ. ಕಾಡುತ್ತಿರುವ ಕೊರಗನ್ನು ನಿರ್ಲಕ್ಷಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!