ದಿನಭವಿಷ್ಯ| ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಗಣಿಸುವ ಪ್ರವೃತ್ತಿ ಬಿಟ್ಟು ಬಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಅನವಶ್ಯವಾಗಿ ಮಾನಸಿಕ ಒತ್ತಡ ಅನುಭವಿಸುವಿರಿ. ಅದಕ್ಕೆ ಕಾರಣ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಗಣಿ ಸುವ ನಿಮ್ಮ ಸ್ವಭಾವ.

ವೃಷಭ
ಇತರರ ವ್ಯವಹಾರದಲ್ಲಿ ಮೂಗು ತೂರಿಸಲು ಹೋಗಬೇಡಿ.ಅದರಿಂದ ನಿಮಗೇ ತೊಂದರೆ ಉಂಟಾದೀತು. ಕುಟುಂಬ ಸದಸ್ಯರ ಜತೆ ದಿನ ಕಳೆಯಿರಿ.

ಮಿಥುನ
ನಿಮ್ಮ ಸಂಬಂಧದಲ್ಲಿ ಮಹತ್ತರ ತಿರುವೊಂದು ಉಂಟಾದೀತು. ತಪ್ಪು ನಡೆ ಇಟ್ಟರೆ ಅದು ಪ್ರಮಾದ ಸೃಷ್ಟಿಸೀತು. ವಿವೇಕದಿಂದ ವರ್ತಿಸಬೇಕು.

ಕಟಕ
ಸಂಘರ್ಷದ ಸಂಕೇತವು ತೋರಿ ಬರುತ್ತಲಿದೆ. ಅದನ್ನು ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನ ಪಡಿ.  ಇಲ್ಲವಾದರೆ ನೀವು ಮಾನಸಿಕ ನೆಮ್ಮದಿ ಕಳಕೊಳ್ಳುವಿರಿ.

ಸಿಂಹ
ದೇವರ ಅನುಗ್ರಹ ನಿಮಗಿದೆ. ಹಾಗಾಗಿ ಕಷ್ಟದ ಪರಿಸ್ಥಿತಿಯನ್ನೂ ಸುಲಭದಲ್ಲಿ ನಿಭಾಯಿಸುವಿರಿ. ಕೌಟುಂಬಿಕ ಅಶಾಂತಿ ನಿವಾರಣೆ.

ಕನ್ಯಾ
ಇತರರು ನಿಮ್ಮ ಕಾರ್ಯವನ್ನು ಗಮನಿಸುತ್ತಿರುತ್ತಾರೆ. ಹಾಗಾಗಿ ವಂಚನೆಯ ದಾರಿ ಹಿಡಿಯಬೇಡಿ. ಕೆಲಸವನ್ನು ಗಂಭೀರ ವಾಗಿ ನಿರ್ವಹಿಸಿ.

ತುಲಾ
ಕೌಟುಂಬಿಕ ವಿಚಾರವೊಂದು ಮನಸ್ಸು ಕೆಡಿಸುವುದು. ಅದನ್ನು ಸುಲಭದಲ್ಲಿ ಪರಿಹರಿಸಬಹುದು. ಆದರೆ ನೀವು ಅದನ್ನು ಕಂಡುಕೊಳ್ಳುತ್ತಿಲ್ಲ.

ವೃಶ್ಚಿಕ
ಶುಭ ಬೆಳವಣಿಗೆ ಸಂಭವಿಸುವುದು. ಉದ್ದಿಮೆಯಲ್ಲಿ ಅವಸರದ ನಿರ್ಧಾರ ತಾಳಬೇಡಿ. ಕೌಟುಂಬಿಕ ಬಿಕ್ಕಟ್ಟು ಪರಿಹಾರದ ಹಂತ ತಲುಪುವುದು.

ಧನು
ಇಂದು ನಿಮ್ಮ ದಿನ. ಉತ್ಸಾಹದಿಂದ ಕಾರ್ಯ ಎಸಗುವಿರಿ. ಎಲ್ಲವೂ ನೀವು ನಿರೀಕ್ಷಿಸಿದಂತೆ ನಡೆಯುವುದು. ಕೌಟುಂಬಿಕ ಸಹಕಾರ, ಸಮಾಧಾನ.

ಮಕರ
ಮಾನಸಿಕ ಉದ್ವಿಗ್ನತೆ. ಹಾಗಾಗಿ ಬಿಡುವಿನ ದಿನವನ್ನು ಸಂತೋಷದಿಂದ ಕಳೆಯಲು ಆಗುವುದಿಲ್ಲ. ಆರೋಗ್ಯದ ಚಿಂತೆ.

ಕುಂಭ
ಹಳೆಯ ನೆನಪಿನಲ್ಲೆ ಬದುಕು ಸಾಗಿಸಬೇಡಿ. ಕೆಲವು ವಿಷಯ ಮರೆತು ಮುಂದೆ ಹೋಗಬೇಕು. ಅತಿಯಾದ ಭಾವುಕತೆ ಒಳಿತಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮೀನ
ಆಪ್ತೇಷ್ಟರ ಸಂಗದಲ್ಲಿ ಸಂತೋಷ ಅನುಭವಿಸುವಿರಿ. ಕೆಲಸದ ಜಂಜಾಟ ವಿಲ್ಲ. ಇಂದಿನ ದಿನ ನಿಮಗೆ ಹಳೆ ನೆನಪು ಕೆದಕಲು ಸಹಕಾರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!