ತನ್ನ ಪಶ್ನೆ ಮೋದಿ ಸರಕಾರಕ್ಕೆ ಹೊರತು ಸೇನೆಗಲ್ಲ: ದಿಗ್ವಿಜಯ ಸಿಂಗ್ ಯು-ಟರ್ನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪುಲ್ವಾಮಾ ಭಯೋತ್ಪಾದಕ ದಾಳಿ ಮತ್ತುಸರ್ಜಿಕಲ್ ಸ್ಟ್ರೈಕ್ ಕುರಿತು ಕೇಂದ್ರ ಸರಕಾರದ ವಿರುದ್ಧ ಮಾತನಾಡಿದ ದಿಗ್ವಿಜಯ ಸಿಂಗ್ ವಿರುದ್ಧ ವೇ ಕಾಂಗ್ರೆಸ್ ಪಕ್ಷ ಅಸಮಾಧಾನಗೊಂಡಿದ್ದು, ರಾಹುಲ್ ಗಾಂಧಿ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಇದರಿಂದ ಮುಜುಗರಕೊಂಡ ಸಿಂಗ್ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.

ಇಂದು ತಮ್ಮ ಹೇಳಿಕೆಗೆ ಸ್ಪಷ್ಟಕರಣ ನೀಡಿದ್ದ ಸಿಂಗ್, ನಾನು ನಮ್ಮ ಸಶಸ್ತ್ರ ಪಡೆಗಳನ್ನು ಅತ್ಯಂತ ಗೌರವದಿಂದ ನೋಡಿದ್ದೇನೆ.ನನ್ನ ಇಬ್ಬರು ಸಹೋದರಿಯರು ನೌಕಾ ಅಧಿಕಾರಿಗಳನ್ನು ಮದುವೆಯಾಗಿದ್ದಾರೆ. ರಕ್ಷಣಾ ಅಧಿಕಾರಿಗಳಿಗೆ ನಾನು ಪ್ರಶ್ನೆಗಳನ್ನು ಕೇಳುವ ಪ್ರಶ್ನೆಯೇ ಇಲ್ಲ, ನನ್ನ ಪ್ರಶ್ನೆಗಳು ಮೋದಿ ಸರ್ಕಾರಕ್ಕೆ ಎಂದು ಟ್ವೀಟ್ ಮಾಡಿದ್ದಾರೆ.

ಪುಲ್ವಾಮಾ ಕುರಿತು ಸಂಸತ್ತಿನ ಮುಂದೆ ಇಲ್ಲಿಯವರೆಗೂ ಯಾವುದೇ ವರದಿಯನ್ನು ನೀಡಿಲ್ಲ, ಅವರು (ಬಿಜೆಪಿ) ಸರ್ಜಿಕಲ್ ಸ್ಟ್ರೈಕ್ ಮಾಡಲಾಗಿದೆ ಎಂದು ಹೇಳಿಕೊಂಡರು, ಆದರೆ ಪುರಾವೆ ತೋರಿಸಲಿಲ್ಲ, ಅವರು (ಬಿಜೆಪಿ) ಕೇವಲ ಸುಳ್ಳುಗಳನ್ನು ಹಬ್ಬಿಸಿದ್ದಾರೆ ಎಂದು ಆರೋಪಿಸಿದ್ದರು.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!