ಹಾಕಿ ಇಂಡಿಯಾ ಅಧ್ಯಕ್ಷರಾಗಿ ದಿಲೀಪ್ ಟಿರ್ಕಿ ಆಯ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದ ಮಾಜಿ ಹಾಕಿ ನಾಯಕ ಮತ್ತು 1998ರ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ತಂಡದ ಸದಸ್ಯ ದಿಲೀಪ್ ಟಿರ್ಕಿ ಅವರನ್ನು ಶುಕ್ರವಾರ ಹಾಕಿ ಇಂಡಿಯಾ (ಎಚ್‌ಐ) ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.
ಟ್ವೀಟ್​ ಮಾಡಿರುವ ಅವರು, ಭಾರತೀಯ ಹಾಕಿಯನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಜಿ ಆಟಗಾರರಲ್ಲಿ ಒಬ್ಬರಾದ ಟಿರ್ಕಿ ತಮ್ಮ ವೃತ್ತಿಜೀವನದಲ್ಲಿ ದಾಖಲೆಯ 412 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಒಡಿಶಾದ 44 ವರ್ಷದ ಶ್ರೇಷ್ಠ ಆಟಗಾರ 1996ರ ಅಟ್ಲಾಂಟಾ, 2000 ಸಿಡ್ನಿ ಮತ್ತು 2004ರ ಅಥೆನ್ಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!