ಕೆನ್ನೆಯ ಮೇಲಿರುವ ಡಿಂಪಲ್ (Dimple)ನ್ನು ನಾವು ಸಾಮಾನ್ಯವಾಗಿ ಆಕರ್ಷಕ ನಗು ಮತ್ತು ಸೌಂದರ್ಯದ ಸೂಚಕವೆಂದು ಪರಿಗಣಿಸುತ್ತಿದ್ದೇವೆ. ಆದರೆ ವೈದ್ಯಕೀಯವಾಗಿ ನೋಡಿದರೆ, ಇದು ಸಣ್ಣ ಮಟ್ಟದ ಸ್ನಾಯು ದೋಷವಾಗಿರುವ ಸಾಧ್ಯತೆಯೂ ಇದೆ ಎಂಬುದು ತಜ್ಞರ ಅಭಿಪ್ರಾಯ.
ವೈಜ್ಞಾನಿಕವಾಗಿ, ಡಿಂಪಲ್‌ಗಳು “ಜೈಗೋಮ್ಯಾಟಿಕಸ್ ಮೇಜರ್” ಎಂಬ ಸ್ನಾಯುವಿನ ವಿಭಿನ್ನ ವಿನ್ಯಾಸದಿಂದ ಉಂಟಾಗುತ್ತವೆ. ಈ ಸ್ನಾಯು ಕೆಲವು ಸಂದರ್ಭಗಳಲ್ಲಿ ಸಂಪೂರ್ಣವಾಗಿ ಬೆಳವಣಿಗೆ ಹೊಂದದಿದ್ದಾಗ, ನಗುವಾಗ ಕೆನ್ನೆಯಲ್ಲಿ ಸಣ್ಣ ಗುಳಿಯಾಗಿ ಕಾಣುತ್ತವೆ. ಈ ವೈಶಿಷ್ಟ್ಯವು ಆನುವಂಶಿಕವಾಗಿರುತ್ತೆ.
ಇದು ಯಾವುದೇ ರೀತಿಯ ಅಪಾಯ ಅಥವಾ ತೀವ್ರ ಆರೋಗ್ಯ ಸಮಸ್ಯೆಗೆ ಕಾರಣವಾಗದಿದ್ದರೂ, ತಾಂತ್ರಿಕವಾಗಿ ಇದು ದೈಹಿಕ ವ್ಯತ್ಯಾಸ (muscular variation) ಎಂದು ಪರಿಗಣಿಸಲಾಗುತ್ತದೆ. ಆದರೂ, ಅನೇಕರು ಇದನ್ನು ಅಂದವಾಗಿ ನೋಡುತ್ತಾರೆ, ಕೆಲವರು ಇಷ್ಟಪಟ್ಟು ಡಿಂಪಲ್ ಶಸ್ತ್ರಚಿಕಿತ್ಸೆಗೆ ಕೂಡ ಮುಂದಾಗುತ್ತಾರೆ.
ಬಾಲಿವುಡ್ ನಟಿ ಪ್ರೀತಿ ಝಿಂಟಾ, ಅಲಿಯಾ ಭಟ್, ದೀಪಿಕಾ ಪಡುಕೋಣೆ ಮತ್ತು ರಚಿತಾ ರಾಮ್ ಮೊದಲಾದ ನಟಿ ಈ ಡಿಂಪಲ್‌ನಿಂದ ಹೆಚ್ಚು ಪಾಪ್ಯುಲರ್ ಆಗಿರುವುದು, ಇದನ್ನು “ಸೌಂದರ್ಯದ ಸಂಕೇತ” ಎಂದು ಜನತೆ ಒಪ್ಪಿಕೊಳ್ಳುತ್ತಾರೆ ಎಂಬುದಕ್ಕೆ ಉದಾಹರಣೆಯಾಗಿದೆ.
ಡಿಂಪಲ್ ಇರುವವರು ಆರೋಗ್ಯದ ದೃಷ್ಟಿಯಿಂದ ಅಪಾಯದಲ್ಲಿಲ್ಲ, ಆದರೆ ಅವು ಹೃದಯ ಗೆಲ್ಲುವ ನಗುಗೆ ಮಾತ್ರವಲ್ಲ, ವೈಜ್ಞಾನಿಕ ಹಿನ್ನೆಲೆಯುಳ್ಳ ವೈಶಿಷ್ಟ್ಯವೂ ಹೌದು.