ಸಂಜೆ ಐದು ಗಂಟೆ ಆಯ್ತು, ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಅನಿಸುತ್ತಲ್ವಾ? ಸ್ನ್ಯಾಕ್ಸ್ ಬದಲು ಊಟ ಮಾಡಿಬಿಡಿ. ಬೇಗನೇ ಸಂಜೆ ತಿನ್ನೋದ್ರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭ ಇದೆ, ನಿಮ್ಮ ಜೀವಿತಾವಧಿ ಕೂಡ ಹೆಚ್ಚು ಮಾಡಿಕೊಳ್ಳಬಹುದು.. ಏನು ಲಾಭ ನೋಡಿ..
ಚೆನ್ನಾಗಿ ಡೈಜೆಷನ್ ಆಗತ್ತೆ, ಹೊಟ್ಟೆ ಖುಷಿಯಾಗಿರುತ್ತದೆ.
ಒಂದೇ ಟೈಮ್‌ನಲ್ಲಿ ಊಟ ಮಾಡುತ್ತಾ ಇರಿ, ನಿಮ್ಮ ನಿದ್ದೆ ಕೂಡ ಇಂಪ್ರೂವ್ ಆಗುತ್ತದೆ.
ಈ ರೀತಿ ಸಂಜೆ ಡಿನ್ನರ್ ಮಾಡೋದ್ರಿಂದ ತೂಕ ಕೂಡ ಇಳಿಕೆಯಾಗುತ್ತದಂತೆ
ಇನ್ನು ನಿಮ್ಮ ಬ್ಲಡ್ ಶುಗರ್ ಮ್ಯಾನೇಜ್ ಮಾಡೋದಕ್ಕೆ ಹಾಗೂ ಶುಗರ್ ಬಾರದೇ ಇರಲು ಅರ್ಲಿ ಡಿನ್ನರ್ ಅಭ್ಯಾಸ ಮಾಡಿಕೊಳ್ಳಿ.
ಈ ರೀತಿ ಸಂಜೆ ತಿಂದು ಮಲಗಿದರೆ ಬೆಳಗ್ಗೆ ಎದ್ದ ತಕ್ಷಣ ಬಾಡಿ ಲೈಟ್ ಆಗಿದೆ ಎನಿಸುತ್ತದೆ. ಜೊತೆಗೆ ಎನರ್ಜಿ ಹೆಚ್ಚಾಗುತ್ತದೆ.
ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಡಯಾಬಿಟಿಸ್‌ನಿಂದ ದೂರ ಇರ್ತೀರಿ.
ಜಸ್ಟ್ ಸೂರ್ಯನನ್ನು ಫಾಲೋ ಮಾಡಿ, ಬೆಳಗ್ಗೆ ನಿಧಾನಕ್ಕೆ ಉದಿಸುತ್ತಾನೆ, ಹಾಗೆ ನಿಮ್ಮ ತಿಂಡಿ ನಿಧಾನಕ್ಕೆ ಆಗಲಿ. ಮೊದಲು ಒಂದು ಲೋಟ ನೀರು ನಂತರ ತಿಂಡಿ.
ಇನ್ನು ಮಧ್ಯಾಹ್ನ ಸೂರ್ಯ ಧಗಧಗ ಉರಿಯುತ್ತಾನೆ. ಈಗ ನಿಮ್ಮ ಮೆಟಬಾಲಿಸಮ್ ಚೆನ್ನಾಗಿ ಇರುತ್ತದೆ, ಈಗ ಇಷ್ಟದ ಆಹಾರ ಸೇವಿಸಿ. ಇನ್ನು ಸೂರ್ಯ ಮುಳುಗುವ ಹೊತ್ತಿಗೆ ಊಟ ಮುಗಿಸಿಬಿಡಿ.