ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………………………….
ಹೊಸದಿಗಂತ ಆನ್ಲೈನ್ ಡೆಸ್ಕ್:
ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಲು 10,000 ಆಮ್ಲಜನಕಯುಕ್ತ ಹಾಸಿಗೆಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಸ್ಟೀಲ್ ಕಂಪನಿಗಳಿಗೆ ನಿರ್ದೇಶನ ನೀಡಿದೆ.
5,000 ಹಾಸಿಗೆಗಳನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳು ಸ್ಥಾಪಿಸಿದರೆ, ಇನ್ನುಳಿದ 5,000 ಹಾಸಿಗೆಗಳನ್ನು ಟಾಟಾ ಸ್ಟೀಲ್, ಜೆಎಸ್ಪಿಎಲ್, ಜೆಎಸ್ಡಬ್ಲ್ಯೂ ಸ್ಟೀಲ್ ಮತ್ತು ಎಎಂಎನ್ಎಸ್ ಇಂಡಿಯಾದಂತಹ ಖಾಸಗಿ ಕಂಪನಿಗಳು ಸ್ಥಾಪಿಸಲಿವೆ ಎಂದು ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ಕೊರೋನಾ ವಿರುದ್ಧ ಹೋರಾಡುವಲ್ಲಿ ಉಕ್ಕಿನ ಉದ್ಯಮದ ಕೊಡುಗೆಯನ್ನು ಹೆಚ್ಚಿಸುವ ಕುರಿತು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಉಕ್ಕಿನ ಉದ್ಯಮಗಳ ಮುಖಂಡರೊಂದಿಗೆ ನಡೆದ ಸರಣಿ ಸಭೆಗಳ ಬಗ್ಗೆ ಸಚಿವರು ಟ್ವೀಟ್ನಲ್ಲಿ ತಿಳಿಸಿದ್ದಾರೆ.ಇವುಗಳ ಜೊತೆಗೆ ಆಮ್ಲಜನಕ ಕೇಂದ್ರಗಳಿಂದ ನೇರವಾಗಿ ಆಸ್ಪತ್ರೆಗಳಿಗೆ ಆಮ್ಲಜನಕವನ್ನು ಪೂರೈಸುವುದು ಸೇರಿದಂತೆ ಉಕ್ಕಿನ ಸ್ಥಾವರಗಳಿಂದ ದ್ರವ ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಸಾಧ್ಯವಾದಷ್ಟು ನೆರವು ನೀಡಲು ಕಂಪನಿಗಳಿಗೆ ಸೂಚಿಸಲಾಗಿದೆ.
ಸರ್ಕಾರಿ ಸ್ವಾಮ್ಯದ ಎಸ್ಐಎಲ್ ಮತ್ತು ಆರ್ಐಎನ್ಎಲ್ ಮತ್ತು ಖಾಸಗಿ ಕಂಪನಿಗಳಾದ ಟಾಟಾ ಸ್ಟೀಲ್, ಜೆಎಸ್ಡಬ್ಲ್ಯೂ ಸ್ಟೀಲ್, ಜೆಎಸ್ಪಿಎಲ್ ಮತ್ತು ಎಎಂಎನ್ಎಸ್ ಇಂಡಿಯಾ ದೇಶದಾದ್ಯಂತ ವಿವಿಧ ಆರೋಗ್ಯ ಕೇಂದ್ರಗಳಿಗೆ ಆಮ್ಲಜನಕವನ್ನು ಪೂರೈಸುತ್ತಿವೆ.
ಸಚಿವಾಲಯದ ಪ್ರಕಾರ, ಸ್ಟೀಲ್ ಪ್ಲಾಂಟ್ಗಳು ಗುರುವಾರ ಆಸ್ಪತ್ರೆಗಳಿಗೆ 3,390 ಟನ್ ವೈದ್ಯಕೀಯ ಆಮ್ಲಜನಕವನ್ನು ಪೂರೈಸಿವೆ.