ಡೈರೆಕ್ಷನ್ ಕ್ಯಾಪ್ ತೊಟ್ಟು ಫೀಲ್ಡಿಂಗ್ ಇಳಿದ ಉಪ್ಪಿ: ಅಭಿಮಾನಿಗಳಲ್ಲಿ ಹೆಚ್ಚಿತ್ತು ‘ಯು.ಐ’ ಕುತೂಹಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೌಥ್​ ಸಿನಿಮಾ ಇಂಡಸ್ಟ್ರಿಯಲ್ಲಿಯೇ ವಿಭಿನ್ನ ನಿರ್ದೇಶನೆ ಮತ್ತು ನಟ ಮೂಲಕ ಅಭಿಮಾನಿಗಳ ಪ್ರೀತಿಯ ನಾಯಕ ಉಪೇಂದ್ರ ಮತ್ತೆ ಸುದ್ದಿಯಲ್ಲಿದ್ದಾರೆ.
ಈ ಬಾರಿ ನಟನೆ ಜೊತೆಗೆ ಏಳು ವರ್ಷಗಳ ವಬಳಿಕ ಉಪ್ಪಿ ಡೈರೆಕ್ಷನ್ ಕ್ಯಾಪ್ ತೊಟ್ಟಿದ್ದು, ಸೋಮವಾರದಿಂದ ಚಿತ್ರೀಕರಣ ಕೂಡ ಶುರುವಾಗಿದೆ.
ಕುದುರೆ ಮುಖ ಆಕಾರದ ಫೋಸ್ಟರ್​ನಲ್ಲಿ ಯು.ಐ ಅಂತಾ ಟೈಟಲ್ ಇಟ್ಟಿರೋ ಚಿತ್ರದ ಮುಹೂರ್ತ ಕಾರ್ಯಕ್ರಮ ಈ ತಿಂಗಳ ಆರಂಭದಲ್ಲಿ ಬಂಡಿಮಹಾಕಾಳಮ್ಮ ದೇವಸ್ಥಾನದಲ್ಲಿ ನಡೆದಿತ್ತು. ಈ ಡಿಫ್ರೆಂಟ್ ಟೈಟಲ್ ಈಗಾಗಲೇ ಸಖತ್​ ಸದ್ದು ಮಾಡಿದ್ದು, ಇದೀಗ ಚಿತ್ರೀಕರಣ ಶುರುವಾಗಿದೆ.
ಮಿನರ್ವ ಮಿಲ್‌ನಲ್ಲಿ ಸೆಟ್​ ಹಾಕಿ ಮೊದಲ ಹಂತದ ಚಿತ್ರೀಕರಣವನ್ನು ಉಪ್ಪಿ ಆರಂಭಿಸಿದ್ದಾರೆ. ಚಿತ್ರಕ್ಕೆ ನಟಿ ಆಯ್ಕೆ ಯಾವಾಗ ಎಂದು ಹೇಳೋದಿಕ್ಕೆ ಬರಲ್ಲ. ಸದ್ಯ ನಮ್ಮ ತಂಡ ಸಿನಿಮಾಗೆ ಸೂಕ್ತ ನಾಯಕಿಯ ಹುಡುಕಾಟದಲ್ಲಿದೆ ಎಂದು ನಿರ್ಮಾಪಕ ಕೆ.ಪಿ ಶ್ರೀಕಾಂತ್ ತಿಳಿಸಿದ್ದಾರೆ.
ಈ‌ ಸಿನಿಮಾ ಮೇಲೆ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆಯೇ ಇದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!