ಉದ್ದವ್‌ ಠಾಕ್ರೆ ಬಣಕ್ಕೆ ನಿರಾಸೆ: ‘ಶಿವಸೇನೆ’ ಕುರಿತು ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ!

 ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕೇಂದ್ರ ಚುನಾವಣಾ ಆಯೋಗ ಶಿವಸೇನೆ ಹೆಸರು ಹಾಗೂ ಲಾಂಛನವನ್ನು ಬಳಸಲು ಶಿಂಧೆ ಬಣಕ್ಕೆ ಅನುಮತಿ ನೀಡಿದ್ದ ಆದೇಶಕ್ಕೆ ತಡೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಉದ್ದವ್‌ ಠಾಕ್ರೆ ಬಣಕ್ಕೆ ನಿರಾಸೆಯಾಗಿದೆ.

ಠಾಕ್ರೆ ಬಣದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌, ಚುನಾವಣಾ ಆಯೋಗದ ತೀರ್ಮಾನಕ್ಕೆ ತಡೆಯಾಜ್ಞೆ ನೀಡೋದು ಸಾಧ್ಯವಿಲ್ಲ ಎಂದು ಹೇಳಿದೆ.

ಇದರಿಂದ ಠಾಕ್ರೆ ಗೆ ಭಾರೀ ಹಿನ್ನಡೆಯಾಗಿದ್ದು, ಮುಂದಿನ ಉಪಚುನಾವಣೆಯಲ್ಲಿ ಏಕ್‌ನಾಥ್‌ ಶಿಂಧೆ ನೇತೃತ್ವದ ಬಣ, ಶಿವಸೇನೆಯ ಹೆಸರು ಹಾಗೂ ಬಿಲ್ಲ ಹಾಗೂ ಬಾಣದ ಗುರುತಿನ ಲಾಂಛನದೊಂದಿಗೆ ಸ್ಪರ್ಧೆ ಮಾಡಲಿದ್ದರೆ, ಉದ್ಧವ್‌ ಠಾಕ್ರೆ ನೇತೃತ್ವದ ಬಣ ಉರಿಯುವ ಜ್ವಾಲೆಯ ಲಾಂಛನದೊಂದಿಗೆ ಸ್ಪರ್ಧೆ ಮಾಡಲಿದ್ದಾರೆ.

ಸುಪ್ರೀಂ ಕೋರ್ಟ್‌ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ಹಾಗೂ ನ್ಯಾಯಮೂರ್ತಿಗಳಾದ ಪಿಎಸ್‌ ನರಸಿಂಹ ಹಾಗೂ ಜೆಬಿ ಪರ್ದಿವಾಲಾ ಇದ್ದ ತ್ರಿಸದಸ್ಯ ಪೀಠ ಈ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದರು.
ಅದೇ ರೀತಿ ಶಿವಸೇನೆ ವಿಚಾರವಾಗಿಠಾಕ್ರೆ ಬಣ ಹಾಗೂ ಶಿಂಧೆ ಬಣದಿಂದ ಎರಡು ವಾರಗಳ ಒಳಗಾಗಿ ಉತ್ತರ ನೀಡುವಂತೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ. ಈ ಹಂತದಲ್ಲಿ ಆದೇಶಕ್ಕೆ ತಡೆ ನೀಡಲು ಸಾಧ್ಯವಿಲ್ಲ ಎಂದು ಸಿಜೆಐ ಡಿವೈ ಚಂದ್ರಚೂಡ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!