ಮಣಿಪುರದಲ್ಲಿ ನಿತೀಶ್‌ ಕುಮಾರ್‌ಗೆ ಮುಖಭಂಗ: ಆರು ಶಾಸಕರಲ್ಲಿ ಐವರು ಬಿಜೆಪಿ ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಬಿಹಾರದಲ್ಲಿ ಅಧಿಕಾರಕ್ಕೇರಿದ ಬೆನ್ನಲ್ಲೇ ಇನ್ನೊಂದು ರಾಜ್ಯ ಮಣಿಪುರದಲ್ಲಿ ನಿತೀಶ್‌ ಕುಮಾರ್‌ ಅವರ ಪಕ್ಷಕ್ಕೆ ಹಿನ್ನಡೆಯುಂಟಾಗಿದೆ. ಮಣಿಪುರದ ಆರು ಜೆಡಿಯು ಶಾಸಕರಲ್ಲಿ ಐವರು ಬಿಜೆಪಿಗೆ ವಿಲೀನಗೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಸಂಸದ ಸುಶೀಲ್‌ ಮೋದಿ ಮಣಿಪುರ ಮತ್ತು ಅರುಣಾಚಲದಂತಹ ರಾಜ್ಯಗಳು ಜೆಡಿಯು-ಮುಕ್ತವಾಗಿವೆ ಎಂದು ನಿತೀಶ್‌ ಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಣಿಪುರ ಜೆಡಿಯು ಶಾಕರಾದ ಖುಮುಚ್ಚಮ್ ಸಿಂಗ್, ನ್ಗುರ್ಸಂಗ್ಲೂರ್ ಸನೇಟ್, ಅಚಾಬ್ ಉದ್ದೀನ್, ತಂಗ್ಜಮ್ ಅರುಣ್ ಕುಮಾರ್ ಮತ್ತು ಎಲ್ಎಂ ಖೌಟೆ ಜೆಡಿಯುವನ್ನು ತೊರೆದು ಬಿಜೆಪಿ ಪಾಳಯವನ್ನು ಸೇರಿಕೊಂಡಿದ್ದಾರೆ.

ಮಣಿಪುರ ವಿಧಾನಸಭೆಯ ಸ್ಪೀಕರ್ ಕೂಡ ಜೆಡಿಯು ಶಾಸಕರು ಮತ್ತು ಬಿಜೆಪಿಯ ವಿಲೀನಕ್ಕೆ ಅನುಮೋದನೆ ನೀಡಿದ್ದಾರೆ. ಕಳೆದ ಒಂಬತ್ತು ದಿನಗಳಲ್ಲಿ ನಿತೀಶ್ ಕುಮಾರ್ ಅವರ ಜನತಾ ದಳ ಯುನೈಟೆಡ್‌ಗೆ ಇದು ಎರಡನೇ ಹೊಡೆತವಾಗಿದೆ. ಈ ಹಿಂದೆ ಆಗಸ್ಟ್ 25 ರಂದು, ಅರುಣಾಚಲ ಪ್ರದೇಶದ ಏಕೈಕ ಜೆಡಿಯು ಶಾಸಕ ಟೆಕಿ ಕಾಸೊ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!