ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ಆನ್ ಲೈನ್ ಡೆಸ್ಕ್:
ಕಿರುತೆರೆ ಮೂಲಕ ಜನರ ಮನೆಮಾತಾಗಿರುವ ದಿಶಾ ಮದನ್ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಹೌದು ದಿಶಾ ಈಗ ಎರಡನೇ ಮಗುವಿಗೆ ತಾಯಾಗುತ್ತಿರುವುದನ್ನು ಸೋಷಿಯಲ್ ಮೀಡಿಯಾದಲ್ಲಿ ಖಚಿತಪಡಿಸಿದ್ದಾರೆ.
ದಿಶಾ ಹಾಗೂ ಶಶಾಂಕ್ ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಇದ್ದು, ನೆಟ್ಟಿಗರ ಮನಗೆದ್ದಿದ್ದಾರೆ. ಮುಂದಿನ ವರ್ಷ ಮಾರ್ಚ್ ವೇಳೆಗೆ ದಿಶಾ ಮತ್ತೊಂದು ಮಗುವಿಗೆ ಜನ್ಮ ನೀಡಲಿದ್ದಾರೆ.
ತಮ್ಮ ಲವ್ ಸ್ಟೋರಿಯ ಒಂದು ಸಣ್ಣ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. 2016ರಲ್ಲಿ ಭೇಟಿಯಾದ ದಿಶಾ ಹಾಗೂ ಶಶಾಂಕ್, 2017ರಲ್ಲಿ ಮದುವೆಯಾದೆವು. 2018ರಲ್ಲಿ ಮಗುವಿನ ನಿರೀಕ್ಷೆಯಲ್ಲಿದ್ದ ನಮಗೆ 2019ರಲ್ಲಿ ಗಂಡು ಮಗು ಜನಿಸಿತು. 2022ರಲ್ಲಿ ನಮ್ಮ ಮಗ ಅಣ್ಣನಾಗಲಿದ್ದಾನೆ. ನಾವು ಮೂವರಿಂದ ನಾಲ್ಕು ಮಂದಿಯಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ದಿಶಾ ಕೇವಲ ಸೋಷಿಯಲ್ ಮೀಡಿಯಾ ಮಾತ್ರವಲ್ಲದೆ ಕಿರುತೆರೆ, ಸಿನಿಮಾ ಸೇರಿದಂತೆ ಹಲವಾರು ಕಡೆ ತಮ್ಮ ಚಾಪು ಮೂಡಿಸಿದ್ದಾರೆ.