ಮೈತ್ರಿಯಿಂದಾಗಿ ದಳದಲ್ಲಿ ಭುಗಿಲೆದ್ದ ಅಸಮಾಧಾನ, ಸಭೆ ಕರೆದ ಹೆಚ್‌ಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಬಿಜೆಪಿ-ಜೆಡಿಎಸ್‌ ಮೈತ್ರಿ ಮಾಡಿಕೊಂಡಾಗಿನಿಂದ ಜಾತ್ಯಾತೀತ ಜನತಾದಳಲ್ಲಿ ಅಸಮಾಧಾನ ಭುಗುಲೆದ್ದಿದ್ದು, ರಾಜೀನಾಮೆ ಘಟನೆಗಳೂ ನಡೆದಿವೆ. ಈಗಾಗಲೇ ಮೈಸೂರು ಭಾಗದ ಮುಸ್ಲಿಂ ಮುಖಂಡರು ರಾಜೀನಾಮೆ ಘೋಷಿಸಿದ್ದಾರೆ. ಪಕ್ಷದಲ್ಲಿ ಇನ್ನೂ ಅಸಮದಾಧಾನ ಹೊಗೆಯಾಡುತ್ತಿದ್ದು, ಶಮನಕ್ಕೆ ಜೆಡಿಎಸ್‌ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ.

ಈ ವಿಚಾರವಾಗಿ ಇಂದು ಅಸಾಮಾಧಾನಿತರ ಸಭೆ ಕರೆಯಲಾಗಿದೆ. ಬಿಡದಿಯ ತಮ್ಮ ತೋಟದ ಮನೆಯಲ್ಲಿ ಕುಮಾರಸ್ವಾಮಿ ಸಭೆ ನಡೆಸಲಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕರು, ಮಾಜಿ ಶಾಸಕರ ಜೊತೆ ಚರ್ಚೆ ನಡೆಸಲಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!