ಆರಾಧ್ಯ ಬಚ್ಚನ್ ಬಗ್ಗೆ ತಪ್ಪು ಮಾಹಿತಿ ಪ್ರಸಾರ: ಯುಟ್ಯೂಬ್ ಚಾನೆಲ್​​​ಗೆ ನಿರ್ಬಂಧ,ವಿಡಿಯೊ ತೆಗೆದು ಹಾಕಲು ನಿರ್ದೇಶಿಸಿದ ದೆಹಲಿ ಹೈಕೋರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ಐಶ್ವರ್ಯಾ ರೈ ಬಚ್ಚನ್ (Aishwarya Rai Bachchan) ಪುತ್ರಿ ಆರಾಧ್ಯ ಬಚ್ಚನ್​​ನ  ಆರೋಗ್ಯದ ಬಗ್ಗೆ ತಪ್ಪಾದ ಮಾಹಿತಿ ಪ್ರಸಾರ ಮಾಡಿದ ಹಲವಾರು ಯುಟ್ಯೂಬ್ ಚಾನೆಲ್​​ಗಳನ್ನು ನಿರ್ಬಂಧಿಸಿ ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಆರಾಧ್ಯ ಮತ್ತು ಅಭಿಷೇಕ್ ಬಚ್ಚನ್ ನೀಡಿದ ದೂರಿನ ವಿಚಾರಣೆ ನಡೆಸಿದ ಕೋರ್ಟ್, ಆರಾಧ್ಯ ಬಚ್ಚನ್ ತೀವ್ರ ಅಸ್ವಸ್ಥರಾಗಿದ್ದಾರೆ ಮತ್ತು ಆಕೆ ಇನ್ನಿಲ್ಲ ಎಂಬ ವಿಷಯಗಳನ್ನು ಪ್ರಕಟಿಸಿದ ಯುಟ್ಯೂಬ್ ಚಾನೆಲ್​​ಗಳ ವಿಡಿಯೊಗಳನ್ನು ಪ್ಲಾಟ್​​ಫಾರ್ಮ್​​​ನಿಂದ ತೆಗೆದು ಹಾಕಬೇಕು ಎಂದು ಗೂಗಲ್​​ಗೆ ನಿರ್ದೇಶಿಸಿದೆ. ಪ್ರತಿಯೊಂದು ಮಗುವನ್ನೂ ಘನತೆ ಗೌರವದಿಂದ ನೋಡಿಕೊಳ್ಳಬೇಕು. ಮಗುವಿನ ಆರೋಗ್ಯಕ್ಕೆ ಸಂಬಂಧಿಸಿದಂತೆ ತಪ್ಪು ಮಾಹಿತಿಯ ಪ್ರಸಾರವು ಕಾನೂನು ವಿರುದ್ಧವಾದುದು ಎಂದು ನ್ಯಾಯಾಲಯ ಹೇಳಿದೆ.

ಈ ಕುರಿತು ಮಧ್ಯಂತರ ಆದೇಶ ನೀಡಿದ ಕೋರ್ಟ್, ಅಪ್‌ಲೋಡ್ ಮಾಡಿದವರ ವಿವರಗಳ ಬಗ್ಗೆ ಫಿರ್ಯಾದಿದಾರರಿಗೆ ತಿಳಿಸಲು ಗೂಗಲ್ಲ್​​ಗೆ ಹೇಳಿದೆ. ಅದೇ ವೇಳೆ ನಮ್ಮ ಗಮನಕ್ಕೆ ತಂದಾಗಲೆಲ್ಲಾ ಇದೇ ರೀತಿಯ ವಿಡಿಯೊಗಳನ್ನು ಸಹ ತೆಗೆದುಹಾಕಲಾಗುವುದು ಎಂದು ಗೂಗಲ್ ಸ್ಪಷ್ಟಪಡಿಸಿದೆ.

1 ರಿಂದ 9 ರವರೆಗಿನ ಪ್ರತಿವಾದಿಗಳು (ಯೂಟ್ಯೂಬ್ ಚಾನೆಲ್‌ಗಳು) ಫಿರ್ಯಾದಿಯ ಆರೋಗ್ಯ ಅಥವಾ ದೈಹಿಕ ಸ್ಥಿತಿಗೆ ಸಂಬಂಧಿಸಿದ ಯಾವುದೇ ಸಾರ್ವಜನಿಕ ವೇದಿಕೆಯಲ್ಲಿ ಯಾವುದೇ ವಿಷಯವನ್ನು ಪ್ರಕಟಿಸುವುದು, ಹಂಚಿಕೊಳ್ಳುವುದು ಮತ್ತು ಪ್ರಸಾರ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ ಎಂದು ನ್ಯಾಯಾಲಯ ಆದೇಶಿಸಿದೆ.

ಮಗುವಿನ ಬಗ್ಗೆ ತಪ್ಪು ಮಾಹಿತಿಯನ್ನು ಹರಡುವುದು ವಿಕೃತ ಮನಸ್ಥಿತಿ ಮತ್ತು ಮಗುವಿನ ಹಿತಾಸಕ್ತಿಗಳಲ್ಲಿ ಸಂಪೂರ್ಣ ನಿರಾಸಕ್ತಿ ಯನ್ನು ಪ್ರತಿಬಿಂಬಿಸುತ್ತದೆ ಎಂದು ನ್ಯಾಯಾಲಯ ಟೀಕಿಸಿದೆ.

ಮಧ್ಯವರ್ತಿ ನಿಯಮಗಳ ದೃಷ್ಟಿಯಿಂದ ತನ್ನ ಯೂಟ್ಯೂಬ್ ಪ್ಲಾಟ್‌ಫಾರ್ಮ್‌ನಲ್ಲಿ ಅಂತಹ ಆಕ್ಷೇಪಾರ್ಹ ವಿಷಯದೊಂದಿಗೆ ವ್ಯವಹರಿಸುವ ಬಗ್ಗೆ ಅದರ ನೀತಿಯನ್ನು ವಿವರವಾಗಿ ತಿಳಿಸಲು ನ್ಯಾಯಾಲಯವು ಗೂಗಲ್ ಗೆ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಕೇಳಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!