Wednesday, August 17, 2022

Latest Posts

ಯಾದಗಿರಿ| ಶುದ್ಧ ಮಣ್ಣಿನಿಂದ ಸಿದ್ದಪಡಿಸಿದ ಗಣಪ ಮೂರ್ತಿ ಸಾರ್ವಜನಿಕರಿಗೆ ವಿತರಣೆ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಯಾದಗಿರಿ:

‘ವಿಜಯ ವಿಠ್ಠಲ ಸೇವಾ ಸಂಸ್ಥೆ(ರಿ ) ಯಾದಗಿರಿ ಹಾಗೂ ವೀರಶೈವ ಮಹಾಸಭಾ ಯಾದಗಿರಿ ಘಟಕ ವತಿಯಿಂದ ಹಮ್ಮಿಕೊಂಡ ಶುದ್ಧ ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿ ಉಚಿತವಾಗಿ ಸಾರ್ವಜನಿಕರಿಗೆ ಹಂಚುವ ಕಾರ್ಯಕ್ರಮಕ್ಕೆ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಡಾ. ಸಿ. ಬಿ. ವೇದಮೂರ್ತಿ ರವರು ಹಾಗೂ ಅನಿಲ್ ಗುರೂಜಿ ರವರ ನೇತೃತ್ವದಲ್ಲಿ ಸಸಿಗೆ ನೀರೆರಿಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಗಣಪತಿಯನ್ನು ಕೂಡಿಸಿ ನೀರಿನಲ್ಲಿ ವಿಸರ್ಜನೆ ಮಾಡಿದಾಗ ಪರಿಸರಕ್ಕೆ ತುಂಬಾ ಹಾನಿಯಾಗುತ್ತದೆ ಇದನ್ನು ಅರಿತು ನಮ್ಮ ಯುವಕರ ತಂಡ ಮಣ್ಣಿನ ಗಣಪತಿ ಮೂರ್ತಿಯನ್ನು ತಯಾರಿಸಿದ್ದಲ್ಲದೆ ಅದನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಿ ಪರಿಸರ ಜಾಗೃತಿ ಮೂಡಿಸಿರುವುದು ತುಂಬಾ ಶ್ಲಾಘನೀಯ ರಂದು ಹೇಳಿದರು.
ಶುದ್ಧ ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿಗಳನ್ನು ಉಚಿತವಾಗಿ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಬಳಕೆ ಹೆಚ್ಚಿಸಲು ರಾಸಾಯನಿಕ ಬಣ್ಣಗಳಿಂದ ಕೂಡಿದ ಪಿ ಓ ಪಿ ಗಣೇಶ ಮೂರ್ತಿಗಳಿಂದ ಪರಿಸರಕ್ಕೆ ಆಗುವ ಹಾನಿ ತಪ್ಪಿಸುವ ಉದ್ದೇಶದಿಂದ ಪರಿಸರಕ್ಕೆ ಪೂರಕವಾಗುವಂತಹ ಶುದ್ಧ ಮಣ್ಣಿನಿಂದ ತಯಾರಿಸಿದ ಸುಮಾರು 160 ಕ್ಕೂ ಹೆಚ್ಚು ಗಣಪತಿ ಮೂರ್ತಿಗಳನ್ನು ತಯಾರಿಸಿ ಉಚಿತವಾಗಿ ಸಾರ್ವಜನಿಕರಿಗೆ ವಿತರಿಸುವ ಮೂಲಕ ಜಾಗೃತಿ ಮೂಡಿಸುವುದು ನಮ್ಮ ತಂಡದ ಉದ್ದೇಶ ಎಂದು ಶರಣು ಪಡಶೆಟ್ಟಿ ಹಾಗೂ ವೀರೇಶ್ ಪುಲಾಮಾಮಿಡಿ ಹೇಳಿದರು.
ನಗರದ ಹಿಂದಿ ಪ್ರಚಾರ ಸಭಾ ಆವರಣದಲ್ಲಿ 15 ದಿನಗಳಿಂದ ಯುವಕರ ಗುಂಪು ಸತತವಾಗಿ ಮಣ್ಣಿನಿಂದ ಗಣೇಶ ಮೂರ್ತಿಗಳನ್ನು ತಯಾರಿಸುವ ಕಾಯಕದಲ್ಲಿ ತೊಡಗಿದೆ.
ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಯಲ್ಲಿ ತುಳಸಿ ಬೀಜಗಳನ್ನು ಹಾಕಲಾಗಿದ್ದು ಅದನ್ನು ಮನೆಯ ಅಂಗಳದಲ್ಲಿ ಬಕೆಟ್ ನಲ್ಲಿ ವಿಸರ್ಜನೆ ಮಾಡಿ ನಂತರ ಆ ಮಣ್ಣನ್ನು ಮನೆಯ ಸಸಿ ಬೆಳೆಯುವ ಪ್ರದೇಶದಲ್ಲಿ ಹಾಕಿದರೆ ತುಳಸಿ ಸಸಿ ಬೆಳೆದು ಶುದ್ಧ ಗಾಳಿ ನೀಡುತ್ತದೆ ಎಂದು ಕಾರ್ಯಕ್ರಮದ ಆಯೋಜಕರು ಹೇಳಿದರು. ಈ ಸಂದರ್ಭದಲ್ಲಿ ಸುಷ್ಮಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು, ವಿಜಯ ಕುಲಕರ್ಣಿ ಕೊಲ್ಲೂರ್, ವಿಠ್ಠಲ್ ಕುಲಕರ್ಣಿ, ಸುಗುರೇಶ್ ಯಾಟ್ ಗಲ್ , ಸಿದ್ದು ಸ್ವಾಮಿ, ಹಾಗೂ ಇನ್ನಿತರರು ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!