ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜಿಲ್ಲಾಡಳಿತದ ಬಿಗಿ ಕ್ರಮದಿಂದ ಸಕ್ಕರೆ ನಾಡಿನಲ್ಲಿ ಸೋಂಕು ಇಳಿಮುಖ: ಡಿಎಚ್‌ಒ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಮಂಡ್ಯ:

ಜಿಲ್ಲಾಡಳಿತದ ಬಿಗಿ ಕ್ರಮದಿಂದಾಗಿ ಸಕ್ಕರೆ ನಾಡಿನಲ್ಲಿ ಕೊರೋನಾ ಸೋಂಕು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟಂಬ ಕಲ್ಯಾಣಾಧಿಕಾರಿ ಡಾ. ಟಿ.ಎನ್. ಧನಂಜಯ ತಿಳಿಸಿದರು.
ಕಳೆದ ಕೆಲ ದಿನಗಳಿಂದ ಜಿಲ್ಲಾಡಳಿತ ಕಠಿಣ ಲಾಕ್‌ಡೌನ್ ವಿಧಿಸಿದ್ದುಘಿ, ಜನರೂ ಸಹ ಉತ್ತಮ ಸ್ಪಂಧನೆ ತೋರಿದ್ದಾರೆ. ಇದರಿಂದಾಗಿ ಸೋಂಕು ಇಳಿಕೆಯಾಗುತ್ತಿದೆ. ಅಳಿದುಳಿದ ಪ್ರಕರಣಗಳ ಬಗೆಗಯೂ ಆರೋಗ್ಯ ಇಲಾಖೆ ಸರ್ವೆ ಕಾರ‌್ಯ ಕೈಗೊಂಡಿದೆ. ಹಳ್ಳಿ ಹಳ್ಳಿಗಳಲ್ಲೂ ಪರೀಕ್ಷೆ ನಡೆಸಲಾಗುತ್ತಿದೆ. ವೈದ್ಯರ ನಡೆ ಹಳ್ಳಿಗಳ ಕಡೆಗೆ ಎಂಬ ಕಾರ‌್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿದ್ದೇವೆ ಎಂದು ಹೊಸದಿಗಂತದೊಂದಿಗೆ ಮಾತನಾಡುತ್ತಾ ತಿಳಿಸಿದರು.
ಈ ಮುನ್ನ 6 ರಿಂದ 7 ಸಾವಿರ ಪರೀಕ್ಷೆ ನಡೆಸಲಾಗುತ್ತಿತ್ತುಘಿ. ಈಗ 8 ರಿಂದ 9 ಸಾವಿರದಷ್ಟು ಪರೀಕ್ಷೆಗಳನ್ನು ಮಾಡುತ್ತಿದ್ದೇವೆ. ಆದರೂ ಸೋಂಕು ಕಡಿಮೆಯಾಗುತ್ತಿರುವುದು ನಿರಾಳವಾದಂತಾಗಿದೆ ಎಂದು ಹೇಳಿದರು.
ಸೋಂಕು ಕಡಿಮೆಯಾಗಿದೆ ಎಂದು ಅಜಾಗರೂಕತೆ ವಹಿಸಿದರೆ ಅನಾಹುತ ತಪ್ಪಿದ್ದಲ್ಲ ಎಂದು ಎಚ್ಚರಿಸಿದ ಅವರು, ಅನಗತ್ಯವಾಗಿ ಓಡಾಡುವುದು, ಗುಂಪು ಸೇರುವುದು, ಕಾರ‌್ಯಕ್ರಮಗಳನ್ನು ಮಾಡುವುದನ್ನು ಸಾರ್ವಜನಿಕರು ಮಾಡಬಾರದು, ಒಂದು ವೇಳೆ ಇಂತಹ ಕ್ರಮಗಳಿಗೆ ಮುಂದಾದಲ್ಲಿ ಮತ್ತೆ ಸೋಂಕು ಹೆಚ್ಚಳವಾಗುವ ಸಾಧ್ಯತೆಗಳಿವೆ. ಆಗ ಮತ್ತೆ ಲಾಕ್‌ಡೌನ್ ಅನಿವಾರ‌್ಯವಾಗುತ್ತದೆ ಎಂದು ಎಚ್ಚರಿಸಿದರು.
ಕೊರೋನಾ ಸೋಂಕು ತಡೆ ಕಾರ‌್ಯಕ್ರಮದಲ್ಲಿ ವಿವಿಧ ಇಲಾಖೆಗಳ ಸಿಬ್ಬಂದಿಗಳು, ವೈದ್ಯರು ಸಹ ಬಲಿಯಾಗಿದ್ದಾರೆ. ಸಾರ್ವಜನಿಕರು ಇದನ್ನು ಮನಸ್ಸಿನಲ್ಲಿಟ್ಟುಕೊಂಡು ಇಲಾಖೆಯೊಂದಿಗೆ ಸಹಕಾರ ನೀಡಬೇಕು. ಮುಂದೆ ಏನೇ ಬಂದರೂ ಸಾರ್ವಜನಿಕರು, ಜನಪ್ರತಿನಿಧಿಗಳ ಸಹಕಾರದಿಂದ ಸಮರ್ಥವಾಗಿ ಕಾರ‌್ಯ ನಿರ್ವಹಿಸುತ್ತಿದ್ದೇವೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss