spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಡಿಸಿ ಸಾಹೇಬ್ರು ಹಳ್ಳಿಗೇ ಬರ್ತಾರ….ಮನೆ ಬಾಗಿಲಿಗೇ ಬರಲಿಕ್ಕಿದೆ ಪಡಿತರ

- Advertisement -Nitte

ಹೊಸದಿಗಂತ ಆನ್ಲೈನ್ ಡೆಸ್ಕ್

ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶ್ರೀಕಾರ ಹಾಕಿರುವ ಕಾರ್ಯಕ್ರಮ ‘ಜಿಲ್ಲಾಧಿಕಾರಿಗಳ ನಡೆ- ಗ್ರಾಮಗಳ ಕಡೆ’. ಕುಂದೂರು ಮತ್ತು ನ್ಯಾಮತಿಗಳಲ್ಲಿ ಈ ಸಂಬಂಧ ಕಾರ್ಯಕ್ರಮಗಳಾಗಿವೆ. 

ಪ್ರಾಯೋಗಿಕವಾಗಿ ಬೆಂಗಳೂರಿನ 28 ಮತಕ್ಷೇತ್ರಗಳಲ್ಲಿ ನವೆಂಬರ್ 1ರಿಂದ ಜನಸೇವಕ ಕಾರ್ಯಕ್ರಮ ಜಾರಿಯಾಗಲಿದೆ. ಇದರಲ್ಲಿ ಆಡಳಿತ ಯಂತ್ರವೇ ಜನರ ಬಳಿ ಹೋಗಿ ಅವರ ಮೂಲಭೂತ ಸೌಲಭ್ಯಗಳನ್ನು ಪೂರೈಸುವ ಪ್ರಯತ್ನ ಮಾಡುತ್ತದೆ. ಜನವರಿ 26ರಿಂದ ಇದನ್ನು ರಾಜ್ಯದ ಎಲ್ಲೆಡೆ ವಿಸ್ತರಿಸುವ ಯೋಜನೆ ಇದೆ.

ಹೊಸ ವರ್ಷದ ಜನವರಿ 26ರಿಂದ ಪಡಿತರವನ್ನೂ ಮನೆಬಾಗಿಲಲ್ಲೇ ವಿತರಿಸುವ ಯೋಜನೆ ಇದೆ ಎಂದು ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. “ಜನರ ಸಾಮಾಜಿಕ ಭದ್ರತೆ ನಿಟ್ಟಿನಲ್ಲಿ ಏನೆಲ್ಲ ಯೋಜನೆಗಳು ಜಾರಿಯಾಗಿವೆಯೋ ಅವೆಲ್ಲ ಜನರಿರುವಲ್ಲೇ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಪಡಿತರವನ್ನು ಮನೆಬಾಗಿಲಲ್ಲೇ ನೀಡುವುದಕ್ಕೆ ವ್ಯವಸ್ಥೆಯೊಂದನ್ನು ರೂಪಿಸುತ್ತಿದ್ದೇವೆ” ಎಂದಿದ್ದಾರೆ ಸಿಎಂ ಬೊಮ್ಮಾಯಿ. 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss