ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸದಿಗಂತ ವರದಿ,ಕಲಬುರಗಿ:
ಅನಧಿಕೃತ ದೇವಸ್ಥಾನಗಳ ತೆರುವಿಗೆ ಸುಪ್ರಿಂ ಕೊರ್ಟ್ ಆದೇಶ ಹಿನ್ನಲೆ ಕಲಬುರಗಿಯಲ್ಲಿ 140 ಕ್ಕೂ ಅಧಿಕ ದೇವಸ್ಥಾನಗಳ ಪಟ್ಟಿಯನ್ನು ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತ ಮಾಡಿಕೊಂಡಿದೆ.
ಮೊದಲ ಹಂತವಾಗಿ 30 ದೇವಸ್ಥಾನಗಳನ್ನು ತೆರುವು ಮಾಡುವುದಕ್ಕೆ ಪಾಲಿಕೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಆದರೆ, ದೇವಸ್ಥಾನ ತೆರುವ ಮಾಡೋದಕ್ಕೆ ಸ್ಥಳಿಯರಿಂದ ವಿರೋಧ ವ್ಯಕ್ತವಾಗುವ ಕಾರಣಕ್ಕೆ ಸ್ಥಳಿಯ ಮುಖಂಡರ ಜೊತೆ ಚರ್ಚಿಸಿ ತೆರುವು ಕಾರ್ಯಚರಣೆಗೆ ಮುಂದಾಗುವುದಕ್ಕೆ ನಗರ ಪಾಲಿಕೆ ಸಿದ್ದವಾಗುತ್ತಿದೆ.
ಈ ಹಿಂದೆ ಆಗಸ್ಟ್ 18 ರಂದು ಕಲಬುರಗಿಯ ಯಮುನಾ ನಗರದಲ್ಲಿರುವ ಹಾದಿ ಬಸವಣ್ಣ ದೇವಸ್ಥಾನ ತೆರವಿಗೆ ಮುಂದಾಗಿದ್ದ ಪಾಲಿಕೆ ಅಧಿಕಾರಿಗಳಿಗೆ ಸಾರ್ವಜನಿಕರು ಚಳಿ ಬಿಡಿಸಿದ್ದರು. ಮಿಂಚಿನ ಪ್ರತಿಭಟನೆ ಮಾಡಿ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದರು. ಇದೀಗ ಮತ್ತೊಮ್ಮೆ ದೇವಾಲಯಗಳನ್ನ ತೆರುವು ಮಾಡುವುದಕ್ಕೆ ಸಿದ್ದವಾಗುತ್ತಿದೆ.
ದೇವಸ್ಥಾನಗಳ ತೆರುವಿಗೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪಾಲಿಕೆ ಅಧಿಕಾರಿಗಳು ದೇವಸ್ಥಾನದ ತಂಟೆಗೆ ಬಂದರೇ, ಸುಮ್ಮನೆ ಬಿಡುವುದಿಲ್ಲ. ಹಿಂದು ವಿರೋಧಿ ಚಟುವಟಿಕೆ ಮಾಡಿದರೇ, ನಮ್ಮ ಜೀವ ಹೊದರು, ತೆರುವು ಮಾಡುವುದಕ್ಕೆ ಬಿಡುವುದಿಲ್ಲ, ನಮ್ಮ ಜೀವ ಬಿಡುತ್ತೇವೆ ಹೊರತು, ದೇವಸ್ಥಾನದ ಒಂದು ಕಲ್ಲು ತೆಗೆಯುವುದಕ್ಕೂ ಬಿಡುವುದಿಲ್ಲ.
ಸರ್ಕಾರಕ್ಕೆ ತಾಕತ್ತು ಇದ್ದರೆ, ಅನಧಿಕೃತ ಮಸೀದಿ , ಚರ್ಚ್ ಗಳನ್ನ ಮೊದಲು ತೆರುವುಗೊಳಿಸಲಿ ನಂತರ ದೇವಸ್ಥಾನಗಳ ತಂಟೆಗೆ ಬರಲಿ ಅಂತ ಕಿಡಿಕಾರುತ್ತಿರುವ ನಾಗರೀಕರು, ದೇವಸ್ಥಾನದ ಒಂದು ಕಲ್ಲು ತೆಗೆಯಬೇಕಾದರೇ, ನಮ್ಮ ಹೆಣದ ಮೇಲೆಯೆ ಕಾಲಿಟ್ಟು ತೆಗೆಯಬೇಕು ಅಂತ ಕೆಂಡ ಕಾರುತ್ತಿದ್ದಾರೆ.