Wednesday, March 29, 2023

Latest Posts

ಆಲ್ಕೋಹಾಲ್ ಬಿಡಿ, ಹಾಲು ಕುಡಿಯಿರಿ: ಜನತೆಗೆ ಉಮಾ ಭಾರತಿ ಕರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜನರು ಮದ್ಯ ಸೇವನೆ ಬಿಡಿ ಅದರ ಬದಲಿಗೆ ಹಸುವಿನ ಹಾಲನ್ನು(Milk) ಕುಡಿಯಲು ಪ್ರಾರಂಭಿಸಿ ಎಂದು ಬಿಜೆಪಿ ನಾಯಕಿ ಉಮಾ ಭಾರತಿ (Uma Bharti) ಕರೆ ನೀಡಿದ್ದಾರೆ.

ಮಧ್ಯಪ್ರದೇಶದ (Madhya Pradesh) ಓರ್ಚಾಗೆ ಭೇಟಿ ನೀಡಿ ಸ್ಥಳೀಯ ಮದ್ಯದ ಅಂಗಡಿಯೊಂದರ ಸುತ್ತಲೂ ಮೇಯುತ್ತಿದ್ದ ಬೀದಿ ಹಸುಗಳನ್ನು ಕಟ್ಟಿ ಅವುಗಳಿಗೆ ಆಹಾರ ನೀಡಿದ್ದಾರೆ.
ಈ ವೇಳೆ ಆ ಮದ್ಯದಂಗಡಿ ಮುಂದೆ ನಿಂತ ಉಮಾ ಭಾರತಿ,’ಶರಾಬ್ ನಹಿ, ದೂಧ್ ಪಿಯೋ’ (ಹಾಲು ಕುಡಿಯಿರಿ, ಮದ್ಯ ಅಲ್ಲ) ಎಂದು ಕರೆ ನೀಡಿದ್ದಾರೆ.

ಸರಣಿ ಟ್ವೀಟ್‌ಗಳಲ್ಲಿ, ಜನರ ಕುಡಿತದ ಚಟವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳದಂತೆ ಉಮಾ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಉಮಾ ಭಾರತಿ ಜೂನ್ 2022 ರಲ್ಲಿ, ಅವರು ಮದ್ಯದ ಅಂಗಡಿಗೆ ಸಗಣಿ ಎಸೆದಿದ್ದರು. ಮಾರ್ಚ್ 2022 ರಲ್ಲಿ ಅವರು ಭೋಪಾಲ್‌ನ ಮತ್ತೊಂದು ಮದ್ಯದ ಅಂಗಡಿಗೆ ಕಲ್ಲು ಎಸೆದರು. ಕಳೆದೆರಡು ತಿಂಗಳಿನಿಂದ ಅವರು ಸಂಪೂರ್ಣ ಮದ್ಯಪಾನ ನಿಷೇಧ ಹಾಗೂ ರಾಜ್ಯದಲ್ಲಿ ಮದ್ಯ ಮಾರಾಟವನ್ನು ನಿಯಂತ್ರಿಸುವಂತೆ ಒತ್ತಾಯಿಸುತ್ತಿದ್ದಾರೆ.

ಉಮಾಭಾರತಿ ಅವರು ಮಂಗಳವಾರ ಮಧ್ಯಪ್ರದೇಶದಲ್ಲಿ ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳ ಹೆಚ್ಚಳಕ್ಕೆ ಮದ್ಯವೇ ಕಾರಣ ಎಂದಿದ್ದಾರೆ. ಅದೇ ರೀತಿ ಭೋಪಾಲ್‌ನ ದೇವಸ್ಥಾನದಲ್ಲಿ ನಾಲ್ಕು ದಿನ ಕಳೆದ ಉಮಾ ಭಾರತಿ, ರಾಜ್ಯದಲ್ಲಿ “ನಿಯಂತ್ರಿತ” ಮದ್ಯ ನೀತಿಯ ಬೇಡಿಕೆಯನ್ನು ಬೆಂಬಲಿಸಲು “ಮಧುಶಾಲಾ ಮೇ ಗೌಶಾಲಾ” (ಮದ್ಯ ಮಾರಾಟ ಕೇಂದ್ರಗಳ ಸ್ಥಳದಲ್ಲಿ ಗೋಶಾಲೆಗಳು) ಕಾರ್ಯಕ್ರಮವನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ಮದ್ಯದ ನೀತಿಗೆ ಕಾಯದೆ, ನಿಯಮಗಳನ್ನು ಉಲ್ಲಂಘಿಸಿ ನಡೆಸುತ್ತಿರುವ ಮದ್ಯದಂಗಡಿಗಳನ್ನು ಗೋಶಾಲೆಯನ್ನಾಗಿ ಪರಿವರ್ತಿಸಲು ನಾನು ಪ್ರಾರಂಭಿಸುತ್ತೇನೆ. ಓರ್ಚಾದಲ್ಲಿರುವ “ಅಕ್ರಮ” ಮದ್ಯದ ಅಂಗಡಿಯ ಹೊರಗೆ 11 ಹಸುಗಳನ್ನು ಕಟ್ಟಿ ಹಾಕಲಿರುವ ವ್ಯವಸ್ಥೆ ಮಾಡಲು ಜನರಿಗೆ ತಿಳಿಸಿದ್ದೇನೆ. “ನನ್ನನ್ನು ತಡೆಯಲು ಯಾರು ಧೈರ್ಯ ಮಾಡುತ್ತಾರೆ ಎಂಬುದನ್ನು ನೋಡುತ್ತೇವೆ .ಈ ಹಸುಗಳಿಗೆ ಆಹಾರ , ನೀರುನ್ನು ನಾನು ಕೊಡುತ್ತೇನೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!