Saturday, August 13, 2022

Latest Posts

ಬಿಗ್‌ಬಾಸ್‌ನಿಂದ ಹೊರಬಂದ ತಕ್ಷಣ ಸಿದ್ಧಾರ್ಥ್ ಶುಕ್ಲಾ ಭೇಟಿ ಮಾಡಬೇಕೆಂದಿದ್ದ ದಿವ್ಯಾ ಅಗರ್ವಾಲ್!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಬಿಗ್‌ಬಾಸ್ ಒಟಿಟಿಯಲ್ಲಿ ದಿವ್ಯಾ ಅಗರ್‌ವಾಲ್ ವಿನ್ನರ್ ಆಗಿ ಹೊರಬಂದಿದ್ದು, ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ.
ಇದೀಗ ಸಂದರ್ಶನಗಳಲ್ಲಿ ಬ್ಯುಸಿಯಾಗಿರುವ ದಿವ್ಯಾ ಸಿದ್ಧಾರ್ಥ್ ಶುಕ್ಲಾ ಬಗ್ಗೆ ಮಾತನಾಡಿದ್ದಾರೆ.
‘ಈಗಲೂ ಇದನ್ನು ನನಗೆ ನಂಬಲು ಆಗುತ್ತಿಲ್ಲ. ಯಾವುದು ನಿಜ ಅನಿಸುತ್ತಿಲ್ಲ. ಹೊರ ಬಂದ ತಕ್ಷಣ ಸಿದ್ಧಾರ್ಥ್ ಭೇಟಿ ಮಾಡಬೇಕು ಎಂದುಕೊಂಡಿದ್ದೆ. ಸಿದ್ಧಾರ್ಥ್ ಬಾಯಿಯಿಂದ ಚೆನ್ನಾಗಿ ಆಡಿದೆ ದಿವ್ಯಾ ಎನ್ನುವ ಮಾತು ಕೇಳಬಯಸಿದ್ದೆ’ ಎಂದು ನೋವಿನ ಮಾತುಗಳನ್ನಾಡಿದ್ದಾರೆ.
‘ಈಗಿದ್ದ ವ್ಯಕ್ತಿ ಸ್ವಲ್ಪ ಸಮಯದಲ್ಲಿ ಇಲ್ಲ ಎಂದರೆ ಬದುಕು ಎಷ್ಟು ವಿಚಿತ್ರ ಎನಿಸುತ್ತದೆ. ಸಿದ್ಧಾರ್ಥ್ ಸಾವಿನ ವಿಷಯ ಅರಗಿಸಿಕೊಳ್ಳಲು ಆಗುತ್ತಿಲ್ಲ’ ಎಂದು ದಿವ್ಯಾ ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss